ಅಣ್ವಸ್ತ್ರ ನಿ‍ಷೇಧ ಒಪ್ಪಂದಕ್ಕೆ ಬದ್ಧ ಅಲ್ಲ: ಪಾಕ್

0
247

ಇಸ್ಲಾಮಾಬಾದ್: ಪರಮಾಣು ಶಸ್ತ್ರಾಸ್ತ್ರಗಳ ನಿಷೇಧದ ಬಗ್ಗೆ ಇತ್ತೀಚಿಗೆ ಮುಕ್ತಾಯಗೊಂಡ ಸಂಧಾನ ಸಭೆಯಲ್ಲಿ ಎಲ್ಲ ಪಾಲುದಾರ ರಾಷ್ಟ್ರಗಳ ಹಿತಾಶಕ್ತಿಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಹೀಗಾಗಿ ಒಪ್ಪಂದಕ್ಕೆ ತಾನು ಬದ್ಧವಾಗಿರುವುದಿಲ್ಲ ಪಾಕಿಸ್ತಾನವು ಹೇಳಿದೆ.

ಜುಲೈ7 ರ ಮತದಾನದಿಂದ ಪರಮಾಣು ನಿಷೇಧದ ಒಡಂಬಡಿಕೆಯು ವಸ್ತುವಿನ ವಿಷಯ ಹಾಗೂ ನಿಯಮ ಪೂರೈಸಲಿಲ್ಲ ಎಂದು ವಿದೇಶಾಂಗ ಇಲಾಖೆ ಹೇಳಿಕೆ ನೀಡಿದೆ.

120ಕ್ಕೂ ಹೆಚ್ಚು ದೇಶಗಳಲ್ಲಿ ಅಣ್ವಸ್ತ್ರಗಳನ್ನು ನಿಷೇಧಿಸುವ ಮೊಟ್ಟ ಮೊದಲ ಜಾಗತಿಕ ಒಪ್ಪಂದವನ್ನು ಅಳವಡಿಸಿಕೊಳ್ಳಲು ವಿಶ್ವಸಂಸ್ಥೆಯು ಮತಚಲಾಯಿಸಿದೆ. ಆದರೆ, ಈ ಸಭೆಗೆ ಪರಮಾಣು ಶಸ್ತ್ರಾಸ್ತ್ರ ಹೊಂದಿರುವ ಅಮೆರಿಕ, ಚೀನಾ ಸೇರಿದಂತೆ 8 ರಾಷ್ಟ್ರಗಳು ಭಾಗವಹಿಸಿರಲಿಲ್ಲ.

LEAVE A REPLY

Please enter your comment!
Please enter your name here