ಅಧ್ಯಯನ ವರದಿ: ಗ್ರೀನ್ ಟೀ ಹಲ್ಲಿನ ಸಮಸ್ಯೆಗೆ ರಾಮಬಾಣ!

0
156

ಗ್ರೀನ್ ಟೀ (ಹಸಿರು ಚಹಾ) ತೂಕ ಕಳೆದುಕೊಳ್ಳಲು ತುಂಬಾ ಸಹಕಾರಿ ಮಾತ್ರವಲ್ಲದೆ ಇದರಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಜರ್ನಲ್ ಎಸಿಎಸ್ ಅಪ್ಲೈಡ್ ಮೆಟೀರಿಯಲ್ಸ್ & ಇಂಟರ್ಫೇಸ್ನಲ್ಲಿ ಪ್ರಕಟಗೊಂಡಿರುವ ಅಧ್ಯಯನದ ಪ್ರಕಾರ ಗ್ರೀನ್ ಟೀಯಿಂದ ಹಲ್ಲಿನ ಸೂಕ್ಷ್ಮ ಸಮಸ್ಯೆ ಮತ್ತು ಹಲ್ಲಿನ ಕುಳಿಗಳ ಸಮಸ್ಯೆ ನಿವಾರಣೆ ಮಾಡಬಹುದು.

ಹಲ್ಲಿನ ರಕ್ಷಣಾತ್ಮಕ ಪದರವು ಎದ್ದು ಹೋದಾಗ ಡೆಂಟಿನ್ ಎನ್ನುವ ಕೋಶವು ಹೊರಬರುವುದು. ಇದರಿಂದ ಹಲ್ಲಿನಲ್ಲಿ ಸೂಕ್ಷ್ಮತೆ ಉಂಟಾಗುವುದು. ಇಂತಹ ಹಲ್ಲುಗಳ ಸಮಸ್ಯೆಯಿದ್ದರೆ ಅತಿಯಾಗಿ ಬಿಸಿ ಅಥವಾ ಹೆಚ್ಚು ತಂಪಾಗಿರುವ ಏನನ್ನಾದರೂ ತಿಂದರೆ ಅದರಿಂದ ನೋವು ಕಾಣಿಸಿಕೊಳ್ಳಬಹುದು.

ಇದು ದೀರ್ಘಕಾಲ ತನಕ ಉಳಿದುಕೊಂಡರೆ ಅದರಿಂದ ಕುಳಿಗಳು ನಿರ್ಮಾಣವಾಗುವುದು. ಚೀನಾದ ವುಹಾನ್ ವಿಶ್ವವಿದ್ಯಾನಿಲಯದ ಕುಯಿ ಹುವಾಂಗ್ ಮತ್ತು ಅವರ ತಂಡವು ಬಯೋಫಿಲ್ಮ್ ಮತ್ತು ಕುಳಿಗಳನ್ನು ಉಂಟುಮಾಡುವ ಸ್ಟ್ರೆಪ್ಟೋಕೊಕಸ್ ಮ್ಯೂಟನ್ಸ್ ವಿರುದ್ಧ ಹೋರಾಡುವ ನ್ಯಾನೋಹೈಡ್ರಾಕ್ಸಿಪ್ಯಾಟೈಟ್ ಮತ್ತು ಇಜಿಸಿಜಿ ನ್ನು ತೆಗೆದುಕೊಂಡಿದ್ದರು.

ಈ ಎಲ್ಲವನ್ನು ಸಿಲಿಕಾ ನ್ಯಾನೊಪರ್ಟಿಕಲ್ಸ್ ಎನ್ನುವ ಖನಿಜಾಂಶದೊಂದಿಗೆ ಬೆರೆಸಿಕೊಂಡಾಗ ಅದು ದಂತಕವಚದಲ್ಲಿ ಆಮ್ಲೀಯ ನಿಕ್ಷೇಪಗಳು ಜಮೆಯಾಗುವುದನ್ನು ತಡೆಯುವುದು ಮತ್ತು ಇದರಿಂದ ಹಲ್ಲುಗಳು ತುಂಡಾಗುವುದು ಹಾಗೂ ಹಾನಿಯಾಗುವುದನ್ನು ತಡೆಯಬಹುದು.

ಗ್ರೀನ್ ಟೀಯು ನೈಸರ್ಗಿಕವಾಗಿ ಬಾಯಿಯ ಸುವಾಸನೆಯನ್ನು ಹೆಚ್ಚಿಸುವುದು. ಕ್ಯಾಟ್ಚಿನ್ ಎನ್ನುವ ಅಂಶವು ಹಲ್ಲಿನಲ್ಲಿ ಪದರಗಳನ್ನು ಉಂಟುಮಾಡುವಂತಹ ಸಕ್ಕರೆಯಂಶವಿರುವ ಖನಿಜಾಂಶ ಅಂಟಿಕೊಳ್ಳುವುದನ್ನು ತಡೆಯುವುದು. ಪದರಗಳಲ್ಲಿ ಇರುವ ಬ್ಯಾಕ್ಟೀರಿಯಾಗಳು ಹಲ್ಲುಗಳ ಸವೆತ ಉಂಟು ಮಾಡುವ ಆಮ್ಲಗಳನ್ನು ಹೆಚ್ಚಿಸುವುದು.

source: boldsky.com

LEAVE A REPLY

Please enter your comment!
Please enter your name here