ಮಾತುಕತೆ ಆಹ್ವಾನ ತಿರಸ್ಕರಿಸಿದ ಉತ್ತರ ಕೊರಿಯ

0
179

ಸೋಲ್: ದಕ್ಷಿಣ ಕೊರಿಯ ಮುಂದಿಟ್ಟಿದ್ದ ಮಾತುಕತೆ ಆಹ್ವಾನವನ್ನು ಉತ್ತರ ಕೊರಿಯ ತಿರಸ್ಕರಿಸಿದೆ ಎಂದು ಯೊನ್ಹಾಪ್ ಸುದ್ದಿಸಂಸ್ಥೆ ವರದಿ ಮಾಡಿದೆ. ವಿಶ್ವಸಂಸ್ಥೆಯು ಹೊಸದಾಗಿ ಮತ್ತಷ್ಟು ನಿಷೇಧ ಹೇರಿದ ಬೆನ್ನಲ್ಲೇ ಉತ್ತರ ಕೊರಿಯವು, ಉಭಯ ದೇಶಗಳ ವಿದೇಶಾಂಗ ಸಚಿವರ ಮಧ್ಯೆ ನಡೆಯಬೇಕಿದ್ದ ಮಾತುಕತೆ ಪ್ರಸ್ತಾವವನ್ನು ತಳ್ಳಿಹಾಕಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದ ದಕ್ಷಿಣ ಕೊರಿಯ ಅಧ್ಯಕ್ಷ ಮೂನ್ ಜೆ ಇನ್ ಅವರು, ಬಿಕ್ಕಟ್ಟಿಗೆ ಶಾಂತಿಯುತ ಪರಿಹಾರ ಕಂಡುಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದರು.

1995-53ರ ಬಳಿಕ ಕೊರಿಯ ಪರ್ಯಾಯ ದ್ವೀಪದಲ್ಲಿ ಮತ್ತೊಂದು ಯುದ್ಧ ನಡೆಯಲು ದಕ್ಷಿಣ ಕೊರಿಯ ಬಿಡುವುದಿಲ್ಲ ಎಂದು ಮೂನ್ ಅವರು ಟ್ರಂಪ್ ಅವರಿಗೆ ಹೇಳಿದರು ಎಂದು ಅಧ್ಯಕ್ಷರ ಕಚೇರಿಯ ಪ್ರಕಟಣೆ ತಿಳಿಸಿದೆ.

ಈ ಮಧ್ಯೆ ಭಾನುವಾರ ರಾತ್ರಿ ನಡೆದ ಪ್ರಾದೇಶಿಕ ಮಂಡಳಿ ಸಭೆಯ ಔತಣಕೂಟದಲ್ಲಿ ಭಾಗಿಯಾಗಿದ್ದ ದಕ್ಷಿಣ ಕೊರಿಯ ವಿದೇಶಾಂಗ ಸಚಿವೆ ಕಾಂಗ್ ಕ್ಯುಂಗ್-ವಾ ಅವರು ಉತ್ತರ ಕೊರಿಯ ವಿದೇಶಾಂಗ ಸಚಿವ ರಿ ಯೊಂಗ್-ಹೊ ಅವರನ್ನು ಭೇಟಿಯಾಗಿ ಹಸ್ತಲಾಘವ ಮಾಡಿದ್ದರು. ದಕ್ಷಿಣ ಕೊರಿಯದ ಮಾತುಕತೆ ಆಹ್ವಾನವನ್ನು ಒಪ್ಪಿಕೊಳ್ಳುವಂತೆ ಅವರು ರಿ ಅವರಿಗೆ ಮನವಿ ಮಾಡಿದ್ದರು.

ಈ ಮಾತುಕತೆಯು ಉಭಯ ದೇಶಗಳ ನಡುವಿನ ಉದ್ವಿಗ್ನತೆ ಕಡಿಮೆಗೊಳಿಸಲಿದೆ ಹಾಗೂ ಬೇರೆಯಾಗಿರುವ ಕೊರಿಯಾದ ಎರಡು ಭಾಗಗಳು ಒಂದಾಗಲು ದಾರಿಯಾಗಲಿದೆ ಎಂದು ಅವರು ಪ್ರತಿಪಾದಿಸಿದ್ದರು.

LEAVE A REPLY

Please enter your comment!
Please enter your name here