ರಾಜಕೀಯ ಪಕ್ಷ ಕಟ್ಟಿದ ಮುಂಬೈ ದಾಳಿ ರೂವಾರಿ ಹಫೀಜ್ ಸಯೀದ್

0
190

ಇಸ್ಲಾಮಾಬಾದ್, ಆಗಸ್ಟ್ 8: ಮುಂಬೈ ದಾಳಿಯ ರೂವಾರಿ ಹಾಗೂ ಜಮಾತ್-ಉದ್-ದಾವಾ ಉಗ್ರರ ಗುಂಪಿನ ನಾಯಕ ಹಫೀಜ್ ಸಯೀದ್, ಪಾಕಿಸ್ತಾನದಲ್ಲಿ ತನ್ನದೇ ಆದ ಹೊಸತೊಂದು ರಾಜಕೀಯ ಪಕ್ಷವನ್ನು ಹುಟ್ಟುಹಾಕಿದ್ದಾನೆ. ಅದರ ಹೆಸರು ಮಿಲ್ಲಿ ಮುಸ್ಲಿಂ ಲೀಗ್ ಪಾಕಿಸ್ತಾನ್.

ಈತನ ಉಗ್ರ ಚಟುವಟಿಕೆ ಹಿನ್ನೆಲೆಯಲ್ಲಿ ಈತನನ್ನು ಬಂಧಿಸಬೇಕೆಂದು ಅಮೆರಿಕ ಸರ್ಕಾರ ತುಂಬಾ ದಿನಗಳಿಂದ ಪಾಕಿಸ್ತಾನ ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಇತ್ತು.

ಇದನ್ನು ತಪ್ಪಿಸಿಕೊಳ್ಳುವ ಕಾರಣದಿಂದಾಗಿಯೇ ಹಫೀಜ್, ಈಗ ಹೊಸ ರಾಜಕೀಯ ಸಂಘಟನೆಯನ್ನು ಹುಟ್ಟುಹಾಕಿದ್ದಾನೆ ಎಂದು ಹೇಳಲಾಗಿದೆ. ಅಂದರೆ, ತನ್ನ ಜಮಾತ್-ಉದ್-ದಾವಾದ ಎಲ್ಲರನ್ನೂ ಮಿಲ್ಲಿ ಮುಸ್ಲಿಂ ಲೀಗ್ ಪಾಕಿಸ್ತಾನ ಪಕ್ಷಕ್ಕೆ ಕರೆತಂದಿದ್ದು, ಆ ಮೂಲಕ, ತಾನು ಇನ್ನು ಉಗ್ರನನಲ್ಲ, ರಾಜಕೀಯ ವ್ಯಕ್ತಿ ಎಂಬ ಮುಖವಾಡ ಧರಿಸಲು ಈ ಪ್ರಯತ್ನ ಮಾಡಿದ್ದಾನೆಂದು ವಿಶ್ಲೇಷಿಸಲಾಗಿದೆ.

source: oneindia.com

LEAVE A REPLY

Please enter your comment!
Please enter your name here