ರಾಜ್ಯಸಭೆ ಚುನಾವಣೆ: ವಿರೋಧ ಪಕ್ಷಕ್ಕೆ ಅಡ್ಡ ಮತದಾನ ಮುಳುವಾಗುವ ಭೀತಿ

0
172

ಹೊಸದಿಲ್ಲಿ /ಅಹ್ಮದಾಬಾದ್ : 2017ರ ರಾಜ್ಯಸಭಾ ಚುನಾವಣೆಗೆ ಇಂದು ಮಂಗಳವಾರ ಬೆಳಗ್ಗೆ ಮತದಾನ ಆರಂಭವಾಗಿದೆ. ವಿರೋಧಪಕ್ಷಕ್ಕೆ ಶಾಸಕರ ಅಡ್ಡಮತದಾನವೇ ಮುಳುವಾಗಲಿದೆ ಎಂಬ ಶಂಕೆ ಬಲವಾಗಿದೆ.

ಒಟ್ಟು ಹತ್ತು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಮೂರು ಸ್ಥಾನಗಳು ಗುಜರಾತ್, ಆರು ಸ್ಥಾನಗಳು ಪಶ್ಚಿಮ ಬಂಗಾಲ, ಮತ್ತು ಒಂದು ಸ್ಥಾನ ಮಧ್ಯಪ್ರದೇಶಕ್ಕೆ ಸೇರಿದ್ದಾಗಿದೆ.

ಈ ಪೈಕಿ ಗುಜರಾತ್ನಲ್ಲಿ ಸಾಗುತ್ತಿರುವ ಚುನಾವಣೆಯು ಅತ್ಯಂತ ಕುತೂಹಲಕಾರಿ ಎನಿಸಿದೆ. ಕಾರಣ ಇಲ್ಲಿನ ಆರು ಕಾಂಗ್ರೆಸ್ ಶಾಸಕರು ನಿಷ್ಠಾಂತರ ಮಾಡಿದ್ದಾರೆ. ಬಿಜೆಪಿ ಆಮಿಷದಿಂದ ದೂರವಿಡಲು 44 ಕೈ ಶಾಸಕರನ್ನು ದೂರದ ಬೆಂಗಳೂರಿನ ರಿಸಾರ್ಟ್ನಲ್ಲಿ ಇರಿಸಲಾಗಿ ಎರಡು ದಿನಗಳ ಹಿಂದಷ್ಟೇ ಅವರನ್ನು ಇಲ್ಲಿಗೆ ಬರಮಾಡಿಕೊಳ್ಳಲಾಗಿದೆ.

ಕಾಂಗ್ರೆಸ್ ನಾಯಕ, ಸೋನಿಯಾ ಗಾಂಧಿ ನಿಕಟವರ್ತಿ, ಅಹ್ಮದ್ ಪಟೇಲ್ ಅವರಿಗೆ ಅಳಿವು ಉಳಿವಿನ ಪ್ರಶ್ನೆಯಾಗಿರುವ ಗುಜರಾತ್ ರಾಜ್ಯಸಭಾ ಚುನಾವಣಾ ಕಣದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಸ್ಮತಿ ಇರಾನಿ ಮತ್ತು ಈಚೆಗಷ್ಟೇ ಕಾಂಗ್ರೆಸ್ ತ್ಯಜಿಸಿ ಬಿಜೆಪಿಗೆ ಬಂದು ರಾಜ್ಯಸಭಾ ಚುನಾವಣಾವಕಾಶ ಪಡೆದುಕೊಂಡಿರುವ ಬಲವಂತ ಸಿಂಗ್ ರಾಜಪೂತ್ ಅವರು ಕಣದಲ್ಲಿದ್ದಾರೆ.

ಗುಜರಾತ್ ನಲ್ಲಿ ಮತದಾನ ಆರಂಭವಾದ ಸ್ವಲ್ಪಹೊತ್ತಿನಲ್ಲೇ ಇಬ್ಬರು ಕೈ ಶಾಸಕರು ಬಿಜೆಪಿಗೆ ಮತ ಹಾಕಿರುವುದನ್ನು ಪಕ್ಷದ ಸದಸ್ಯ ಅರ್ಜುನ್ ಮೋಧ್ವಾಡಿಯಾ ಒಪ್ಪಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here