ಸುದೀಪ್ ಸಾಂಸ್ಕೃತಿಕ ಪರಿಷತ್ತಿನ ಬಹಿರಂಗ ಪತ್ರ.

0
169

ಸುದೀಪ್ ನನ್ನ ಸ್ನೇಹಿತನೇ ಅಲ್ಲವೆಂದ ದರ್ಶನ್ ಕುರುಕ್ಷೇತ್ರಕ್ಕೆ ಸುದೀಪ್ ಶುಭಾಶಯ ಹೇಳಿದ್ದಾರೆಂದರೆ ಅದು ತೆಗೆದು ಹಾಕುವ ವಿಷಯವಲ್ಲ. ಅತ್ಯಂತ ಗಂಭೀರವಾಗಿ ಯೋಚಿಸಲು ಅರ್ಹವಾದ ವಿಷಯ. ಸುಮ್ನೆ ಯೋಚಿಸಿ ನೋಡಿ, ನಮ್ಮನ್ನ್ಯಾರೋ ಒಬ್ಬಾತ ನೀನು ನನ್ನ ಗೆಳೆಯನೇ ಅಲ್ಲ ಅಂತ ಪಬ್ಲಿಕ್ ನಲ್ಲಿ ಹೀಯಾಳಿಸಿದಾಗ, ಜನ್ಮದಲ್ಲಿ ಅವನ ಮುಖ ನೋಡಬಾರದು ಅಂದ್ಕೋತೀವಿ ಅಲ್ವಾ? ನಮ್ಮಂತಹ ಸಾಮಾನ್ಯರಿಗೇ ಹಾಗನ್ನಿಸಬೇಕಾದರೆ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಸುದೀಪ್ ಅವರಿಗೆ ಇನ್ನೆಷ್ಟು ಮುಜುಗರವಾಗಿರಬೇಕು? ಹಿಂಸೆಯೆನಿಸಿರಬೇಕು? ನೋವಾಗಿರಬೇಕು? ಹಾಗೆ ಸುದೀಪ್ ಕೂಡಾ ಎಲ್ಲರಂತೆ ಚಿಂತಿಸಿದ್ದಿದ್ದರೆ ದರ್ಶನ್ ಅವರನ್ನು ಸುದೀಪ್ ಜೀವನಪರ್ಯಂತ ನೆನಪಿಸಿಕೊಳ್ಳುತ್ತಿರಲಿಲ್ಲವೇನೋ. ಆದರೆ ಸುದೀಪ್ ಹಾಗೆ ಮಾಡಲಿಲ್ಲ ಬದಲಾಗಿ ತನ್ನ ಗೆಳೆಯನ ಆತುರದಲ್ಲಿ ತೆಗೆದುಕೊಂಡ ನಿರ್ಧಾರವನ್ನು ಅತ್ಯಂತ ಸಂಯಮದಿಂದ ನಿಭಾಯಿಸಿದ್ದಾರೆ. ಕನ್ನಡದ ಮಟ್ಟಿಗೆ ದಾಖಲಾರ್ಹ ಚಿತ್ರವಾಗಿ ಮೂಡಿಬರುತ್ತಿರುವ ಕುರುಕ್ಷೇತ್ರಕ್ಕೆ ಶುಭಾಶಯ ಕೋರಿದ್ದಾರೆ. ಈ ಚಿತ್ರ ಕನ್ನಡದ ಹಿರಿಮೆಗೆ ಗರಿಯಾಗಲಿ ಎನ್ನುತ್ತಲೇ ದರ್ಶನ್ ಅವರಿಂದ ಮಾತ್ರ ಈ ಪಾತ್ರ ಮಾಡಲು ಸಾಧ್ಯ ಎಂದು ಮುಕ್ತಕಂಠದಿಂದ ಹೊಗಳಿದ್ದಾರೆ. ಒಬ್ಬ ಸೂಪರ್ ಸ್ಟಾರ್ ಮತ್ತೊಬ್ಬ ಸೂಪರ್ ಸ್ಟಾರ್ ಬಗ್ಗೆ ಈ ರೀತಿ ಹೇಳುತ್ತಾರೆ ಅಂದರೆ ಆತನೆಷ್ಟು ಹೃದಯವಂತನೆಂದು ಅರ್ಥೈಸಿಕೊಳ್ಳಬೇಕಿದೆ.

ಸುದೀಪ್ ಹೆಚ್ಚೆಚ್ಚು ಪ್ರಬುದ್ದರಾಗುತ್ತಿದ್ದಾರೆ. ಸರ್ವೇಜನ ಸುಖಿನೋಭವಂತು ಎನ್ನುತ್ತಿದ್ದಾರೆ. ಚಿತ್ರರಂಗವನ್ನು ಒಂದೇ ಕುಟುಂಬದ ರೀತಿ ನೋಡುತ್ತಿದ್ದಾರೆ. ಆ ಕುಟುಂಬದ ಸದಸ್ಯನೊಬ್ಬ ಆತುರದಿಂದ ಮಾತನಾಡಿದಾಗ, ಹಿರಿಯಣ್ಣನ ಸ್ಥಾನದಲ್ಲಿ ನಿಂತು ಸಂಯಮ, ಪ್ರಬುದ್ಧತೆಯಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಪ್ಪಿಸುತ್ತಿದ್ದಾರೆ.

ಇದಲ್ಲವೇ ನಾಯಕತ್ವ! ಇದಲ್ಲವೇ ಹೃದಯವಂತಿಕೆ! ಇದಲ್ಲವೇ ಹಿರಿತನದ ಮಾದರಿ! ಈ ಸತ್ಸಂಪ್ರದಾಯ ಹೀಗೇ ಮುಂದುವರಿಯಲಿ, ಕನ್ನಡ ಚಿತ್ರರಂಗ ಒಂದೇ ದೋಣಿಯಲ್ಲಿ ಪಯಣಿಸಲಿ.

ಆ ತಲೆಮಾರಿನಲ್ಲಿ ರಾಜ್ ಮತ್ತು ವಿಷ್ಣು ಅವರ ಮಧ್ಯೆ ತಂದಿಟ್ಟು ತಮಾಷೆ ನೋಡಿದ ಕಾರಣಕ್ಕೆ ಚಿತ್ರರಂಗಕ್ಕೆ ಉಂಟಾದ ಅಪಾರನಷ್ಟ ಈ ಕಾಲದ ಸುದೀಪ್, ದರ್ಶನ್ ಅವರ ವಿಷ್ಯದಲ್ಲಿ ಆಗದಿರಲಿ ಎಂದು ಆಶಿಸೋಣ. ಅದೇ ನಿಲುವನ್ನು ಪ್ರದರ್ಶಿಸುತ್ತಿರುವ ಸುದೀಪ್ ಅವರನ್ನು ಅಭಿನಂದಿಸೋಣ. ಕೊನೆಗೊಂದು ಮಾತು. ಮೊಸರಲ್ಲಿ ಕಲ್ಲು ಹುಡುಕುವ ಕೆಲವು ಜನ, “ದರ್ಶನ್ ಫ್ಯಾನ್ಸ್ ಮನಗೆಲ್ಲಲು ಸುದೀಪ್ ಆ ಟ್ವೀಟ್ ಮಾಡಿರಬಹುದು” ಅಂತ ಹೇಳಬಹುದು.

ಆದರೆ ಅದೆಲ್ಲಾ ನಂಬಲರ್ಹವಲ್ಲದ ಸಂಗತಿಗಳಷ್ಟೇ. ಯಾಕೆಂದರೆ ಸುದೀಪ್ ಕೂಡಾ ಅಪಾರ ಫ್ಯಾನ್ಸ್ ಫಾಲೋಯಿಂಗ್ ಇರುವ ನಟ. ಸುದೀಪ್ ಅವರಿಗೆ ಆ ಅನಿವಾರ್ಯತೆಗಳೇನು ಇಲ್ಲ ಎಂಬುದು ಕನ್ನಡಿಗರು ಬಲ್ಲದ ವಿಷಯವೇನಲ್ಲ.

LEAVE A REPLY

Please enter your comment!
Please enter your name here