ಷರತ್ತಿನ ಮೇಲೆ ರೇಸ್-3ಗೆ ಬರ್ತಿದ್ದಾರೆ ಸಲ್ಮಾನ್

0
170

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ತಮ್ಮ ಮುಂಬರುವ ಚಿತ್ರಗಳ ಮೇಲೆ ವಿಶೇಷ ಗಮನ ನೀಡ್ತಿದ್ದಾರೆ. ಟ್ಯೂಬ್ಲೈಟ್ ಚಿತ್ರದ ನಂತ್ರ ಸಲ್ಮಾನ್ ಖಾನ್ ಜಾಗರೂಕರಾಗಿದ್ದಾರೆ. ತಮ್ಮ ಚಿತ್ರಕ್ಕಾಗಿ ಸಿಕ್ಕಾಪಟ್ಟೆ ಶ್ರಮವಹಿಸ್ತಿದ್ದಾರೆ. ಟ್ಯೂಬ್ಲೈಟ್ ವಿಫಲವಾದ ನಂತ್ರ ಪ್ರತಿಯೊಂದು ಹೆಜ್ಜೆಯನ್ನೂ ಎಚ್ಚರಿಕೆಯಿಂದಿಡುತ್ತಿದ್ದಾರೆ.

ಈಗ ಸಲ್ಮಾನ್ ಖಾನ್ ಬಳಿ ಟೈಗರ್ ಜಿಂದಾ ಹೇ, ಭಾರತ್, ಡಾನ್ಸಿಂಗ್ ಡ್ಯಾಡಿ ಚಿತ್ರಗಳಿವೆ. ರೇಸ್ ಸರಣಿ ರೇಸ್-3ನಲ್ಲಿ ಸಲ್ಮಾನ್ ಕಾಣಿಸಿಕೊಳ್ಳಲಿದ್ದಾರೆಂಬ ಸುದ್ದಿಯಿದೆ. ನಿರ್ಮಾಪಕ ರಮೇಶ್ ಕಳೆದ ನಾಲ್ಕು ವರ್ಷಗಳಿಂದ ರೇಸ್ ನಲ್ಲಿ ಕೆಲಸ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಆದ್ರೆ ಸಲ್ಮಾನ್ ಒಪ್ಪಿಗೆ ನೀಡಿರಲಿಲ್ಲ. ಈಗ ರಮೇಶ್ ಪ್ರಯತ್ನಕ್ಕೆ ಯಶಸ್ಸು ಸಿಗುವ ಮುನ್ಸೂಚನೆ ಕಾಣ್ತಿದೆ.

ಮೂಲಗಳ ಪ್ರಕಾರ ರೇಸ್-3ನಲ್ಲಿ ಕೆಲಸ ಮಾಡಲು ಒಪ್ಪಿಗೆ ನೀಡಿದ್ದಾರೆ ಎನ್ನಲಾಗ್ತಿದೆ. ಆದ್ರೆ ಒಂದು ಷರತ್ತಿನ ಮೇಲೆ ಒಪ್ಪಿಗೆ ನೀಡಿದ್ದಾರೆಂದು ಮೂಲಗಳು ಹೇಳ್ತಿವೆ. ರೆಮೊ ಡಿಸೋಜಾಗೆ ನಿರ್ದೇಶನದ ಹೊಣೆ ನೀಡಿದ್ರೆ ಮಾತ್ರ ನಾನು ಚಿತ್ರದಲ್ಲಿ ನಟಿಸ್ತೇನೆ ಎಂದಿದ್ದರಂತೆ ಸಲ್ಮಾನ್. ಇದಕ್ಕೆ ನಿರ್ಮಾಪಕರು ಒಪ್ಪಿಗೆ ನೀಡಿದ್ದಾರಂತೆ. ಸದ್ಯ ಸಲ್ಮಾನ್ ಹಾಗೂ ಕತ್ರಿನಾ ಜೋಡಿ ಟೈಗರ್ ಜಿಂದಾ ಹೇ ಚಿತ್ರೀಕರಣದಲ್ಲಿ ಬ್ಯುಸಿಯಿದೆ.

LEAVE A REPLY

Please enter your comment!
Please enter your name here