ಸೋದರಳಿಯನೊಂದಿಗೆ ಸಲ್ಮಾನ್ – ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು ವಿಡಿಯೋ

0
179

ಸಲ್ಮಾನ್ ಖಾನ್. ಬಾಲಿವುಡ್ ನ ಸಕ್ಸೆಸ್ ಫುಲ್ ಹಿರೋ. ತನ್ನ ಸಹೋದರಿ ಅರ್ಪಿತಾ ಖಾನ್ ನನ್ನು ಅತ್ಯಂತ ಹೆಚ್ಚಾಗಿ ಪ್ರೀತಿಸುವ ಸಲ್ಮಾನ್ ಖಾನ್, ಆಕೆಯ ಮಗು ಅಂದರೆ ತನ್ನ ಸೋದರಳಿಯನ ಮೇಲೆ ಇನ್ನಿಲ್ಲದ ಪ್ರೀತಿ ಇಟ್ಟುಕೊಂಡಿದ್ದಾರೆ. ಪ್ರೀ ಟೈಂನಲ್ಲಿ ಮಗುವಿನೊಂದಿಗೆ ಕಳೆಯುವ ಸಲ್ಮಾನ್ ಖಾನ್ ಈ ಬಾರಿ ತನ್ನ ಸೋದರಳಿಯ ಅಖಿಲ್ ಗಾಗಿ ಸುಲ್ತಾನ್ ಚಿತ್ರದ ಹಾಡನ್ನು ಹಾಡಿದ್ದಾರೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ನೋಡಿದರೆ ಇದೇನಾ ಸಲ್ಮಾನ್ ಖಾನ್ ಎಂಬಂತೆ ಭಾಸವಾಗುತ್ತದೆ. ನಾವು ತೆರೆಮೇಲೆ ನೋಡಿದ ಸಲ್ಮಾನ್ ಇಲ್ಲಿ ಕಂಪ್ಲೀಟ್ ಢಿಫರೆಂಟ್. ಥೇಟ್ ಮಗುವಿನೊಂದಿಗೆ ಮಗುವಾಗಿ, ಸುಲ್ತಾನ್ ಚಿತ್ರದ ಹಾಡನ್ನು ಹಾಡುತ್ತಾ ಅಳಿಯನೊಂದಿಗೆ ತುಂಟಾಟವಾಡುತ್ತಿರುವ ದೃಷ್ಯ ಎಲ್ಲರ ಗಮನ ಕೇಂದ್ರೀಕರಿಸಿದೆ.

ತನ್ನ ಮಗುವಿನೊಂದಿಗೆ ಸಲ್ಮಾನ್ ಆಟವಾಡುತ್ತಿರುವ ವಿಡಿಯೋವನ್ನು ಚಿತ್ರೀಕರಿಸಿರುವ ಆರ್ಪಿತಾ ಖಾನ್, ನಾನು ನಿಜಕ್ಕೂ ಇಂತಹ ಅಣ್ಣನನ್ನು ಪಡೆಯಲು ಪುಣ್ಯ ಮಾಡಿದ್ದೇನೆ. ಅತೀಯಾಗಿ ಪ್ರೀತಿಸುವ, ಕೇರ್ ಮಾಡುವ, ಸಹೋದರ ನನಗೆ ಸಿಕ್ಕಿದ್ದಾನೆ. ಲವ್ ಯು ಅಣ್ಣಾ. ಹ್ಯಾಪಿ ರಾಖಿ ಎಂದು ಪೋಸ್ಟ್ ಮಾಡಿದ್ದಾರೆ.

ಅರ್ಪಿತಾ ಖಾನ್ ಎಂದರೆ ಸಲ್ಮಾನ್ ಖಾನ್ ಗೆ ಎಲ್ಲಿಲ್ಲದ ಪ್ರೀತಿ. ಕಳೆದ ವರ್ಷ ವೈವಾಹಿಕ ಜೀವಕ್ಕೆ ಕಾಲಿಟ್ಟ ಅರ್ಪಿತಾಗೆ ಮುದ್ದಾದ ಅಖಿಲ್ ಹೆಸರಿನ ಗಂಡು ಮಗುವಿದೆ. ಈ ಮಗುವೆಂದರೆ ಸಲ್ಮಾನ್ ಖಾನ್ ಗೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ಸಮಯ ಸಿಕ್ಕಾಗಲೆಲ್ಲಾ ಮನಸ್ಸು ಖುಷಿಪಡಿಸಿಕೊಳ್ಳಲು ಸಲ್ಮಾನ್ ಅಖಿಲ್ ಜೊತೆಗೆ ಇರುತ್ತಾರಂತೆ…

Source: DailyHunt

LEAVE A REPLY

Please enter your comment!
Please enter your name here