300 ಥಿಯೇಟರ್ ಗಳಲ್ಲಿ ಮಾಸ್ ಲೀಡರ್

0
375

ಈ ವಾರ (ಆ 11 ) ರಾಜ್ಯದ್ಯಂತ ತೆರೆ ಕಾಣುತ್ತಿರುವ ಮಾಸ್ ಲೀಡರ್ ಚಿತ್ರ ಟೈಟಲ್ ಕಾರಣಕ್ಕೆ ವಿವಾದಕ್ಕೆ ಒಳಗಾಗಿತ್ತು . ಆದರೆ ಎಲ್ಲ ಅಡ್ಡಿ ಆತಂಕಗಳಿಂದ ಹೊರಬಂದು ರಾಜ್ಯದ್ಯಂತ ಚಿತ್ರವನ್ನು ರಿಲೀಸ್ ಮಾಡುವುದಾಗಿ ನಿರ್ಮಾಪಕ ತರುಣ್ ಶಿವಪ್ಪ ತಿಳಿಸಿದ್ದಾರೆ .

ಶಿವರಾಜ್ ಕುಮಾರ್ ಅವರ ಜತೆ ಸಿನಿಮ ಮಾಡಬೇಕು ಎಂಬುದು ನನ್ನ ಕನಸಗಿತ್ತು . ಅದು ಈಗ ಈಡೇರಿದೆ ಎಂದು ಅವರು ಹೇಳಿದರೆ .

ಈಗಾಗಲೇ ನಮ್ಮ ಚಿತ್ರದ ಪೋಸ್ಟರ್ ಗಳು ಹಾಗೂ ಟೀಸರ್ ಗಳು ಪ್ರೇಕ್ಷಕರ ಮನಗೆದ್ದಿವೆ. ಚಿತ್ರವು ಅದ್ಧೂರಿಯಾಗಿ ಬಂದಿದ್ದು ಕನ್ನಡ ಪ್ರೇಕ್ಷಕರಿಗೆ ಇಷ್ಟವಾಗಲಿದೆ . ನಿರ್ದೇಶಕ ನರಸಿಂಹ ಅತ್ಯುತ್ತಮ ಪ್ರಾಡಕ್ಟ್ ಅನ್ನು ಕೈಗಿಟ್ಟಿದಾರೆಂದು ತರುಣ್ ಶಿವಪ್ಪ ತಿಳಿಸಿದ್ದಾರೆ .

‘ ಶಿವರಾಜ್ ಕುಮಾರ್ ಹೀರೋ ಅಂತ ಫಿಕ್ಸ್ ಆದಾಗಲೇ ಚಿತ್ರಕ್ಕೆ ಲೀಡರ್ ಅಂತ ಹೆಸರಿಟ್ಟು ಕತೆ ಬರೆಯಲು ಅರಂಬಿಸಿದೆವು . ಮಾಸ್ ಅಂಶಗಳು ಜಾಸ್ತಿ ಇರುವ ಕಾರಣಕ್ಕಾಗಿ ಈ ಸಿನಿಮಾ ಮಾಸ್ ಲೀಡರ್ ಎಂದು ಹೆಸರಿಡಬೇಕಾಗಿ ಬಂತು .ಎರಡು ವರ್ಷಗಳ ಕಾಲ ಸ್ಕ್ರಿಪ್ಟ್ ಮಾಡಿದ್ದೇವೆ . ಮುಕ್ಯ ದೃಶ್ಯಗಳನ್ನು ಕಾಶ್ಮೀರದಲ್ಲಿ ಚಿತ್ರೀಕರಿಸಿದ್ದೇವೆ . ಇದೊಂದು ವಿಭಿನ್ನ ಸಿನಿಮಾ ‘  ಎಂದು ಅವರ ಟೈಟಲ್ ಬಗ್ಗೆ ಮಾಹಿತಿ ನೀಡಿದ್ದಾರೆ . ಶಿವರಾಜ್ ಕುಮಾರ್ ,ವಿಜಯ್ ರಾಘವೇಂದ್ರ , ಪ್ರನಿತಾ . ಶರ್ಮಿಳಾ ಮಾಂಡ್ರೆ ಸಿನಿಮಾದ್ದಲ್ಲಿದಾರೆ .

ಭ್ರಷ್ಟಾಚಾರವು ದೇಶದ ಎಲ್ಲ ವ್ಯವಸ್ಥೆಗಳ ಜತೆಗೆ ಆಕ್ರಮ ನುಸುಲಿಕೋರರ ಬಗೆಗೂ ಚಿತ್ರ ಕತೆಯಲ್ಲಿಹೇಳಲಾಗಿದೆಯಂತೆ. ಇದು ಹಾರ್ದಿಕ್ ತರುಣ್ ಕಂಬೈನ್ಸ್ ನಲ್ಲಿ ಬಂದಿರುವ ಸಿನಿಮಾ. ತರುಣ್ ಶಿವಪ್ಪ ಮತ್ತು ಹಾರ್ದಿಕ್ ಗೌಡ ಜಂಟಿಯಾಗಿ ನಿರ್ಮಾಣ ಮಾಡಿದ್ದು ಆಗಸ್ಟ್ 11 ರಿಂದ ರಾಜ್ಯಾದ್ಯಂತ ರೆಲೀಸ್ ಆಗುತ್ತದೆ .

LEAVE A REPLY

Please enter your comment!
Please enter your name here