ಪ್ರಧಾನಿ ಮೋದಿ ಜನಪ್ರಿಯತೆ ಜೀರ್ಣಿಸಿಕೊಳ್ಳಲಾಗದ ರಾಹುಲ್’ರಿಂದ ಅಸಂಬದ್ಧ ಹೇಳಿಕೆ: ಬಿಜೆಪಿ

0
112
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನಪ್ರಿಯತೆಯನ್ನು ನೋಡುತ್ತಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗದೆ ಬಿಜೆಪಿ ಹಾಗೂ ಆರ್’ಎಸ್ಎಸ್ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆಂದು ಬಿಜೆಪಿ ಶುಕ್ರವಾರ ಹೇಳಿಕೊಂಡಿದೆ. ಈ ಕುರಿತಂತೆ ಮಾತನಾಡಿರುವ ಜಿವಿಎಲ್ ನರಸಿಂಹ ರಾವ್ ಅವರು, ರಾಹುಲ್ ಅವರ ಹೇಳಿಕೆ ಅವರ ವಂಶದ ಸೊಕ್ಕನ್ನು ತೋರಿಸುತ್ತದೆ. ಬಿಜೆಪಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ತೆಗಳುವ ಮೂಲಕ ಮಾಧ್ಯಮಗಳ ಗಮನ ಸೆಳೆಯಲು ರಾಹುಲ್ ಗುರಿ ಹೊಂದಿದ್ದಾರೆಂದು ಹೇಳಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನಪ್ರಿಯತೆಯನ್ನು ಜೀರ್ಣಿಕೊಳ್ಳಲು ರಾಹುಲ್ ಗೆ ಸಾಧ್ಯವಾಗುತ್ತಿಲ್ಲ.
ಅವರ ಹೇಳಿಕೆಯನ್ನು ಗಮನಿಸಿದರೆ ವಂಶದ ಸೊಕ್ಕನ್ನು ತೋರಿಸುತ್ತದೆ. ರಾಜಕೀಯ ಹಾಗೂ ಆಡಳಿತದ ಬಗ್ಗೆ ರಾಹುಲ್ ಅರ್ಥ ಮಾಡಿಕೊಂಡಿರುವುದನ್ನು ನೋಡಿದರೆ ಶೋಚನೀಯ ಎನಿಸುತ್ತದೆ. ಪ್ರಸ್ತುತ ರಾಹುಲ್ ಅವರ ನೀಡುತ್ತಿರುವ ಹೇಳಿಕೆಗಳು ಮಾಧ್ಯಮಗಳ ಗಮನ ಸೆಳೆಯುವ ಸಲುವಾಗಿ ಆಷ್ಟೇ. ಅವರ ಹೇಳಿಕೆಗಳು ಅವರ ಭವಿಷ್ಯವನ್ನು ಕೆಳಮಟ್ಟಕ್ಕಿಳಿಸುತ್ತದೆ ಎಂದು ತಿಳಿಸಿದ್ದಾರೆ. ನಿನ್ನೆಯಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಕಿಡಿಕಾರಿದ್ದ ರಾಹುಲ್ ಗಾಂಧಿಯವರು, ಮೇಕ್ ಇನ್ ಇಂಡಿಯಾ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹೇಳುತ್ತಿದೆ. ಆದರೆ ದೇಶದಲ್ಲಿ ಸಿಗುತ್ತಿರುವ ಬಹುತೇಕ ವಸ್ತುಗಳು ಚೀನಾ ಉತ್ಪಾದಿತವೇ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಎನ್ನುತ್ತಿದ್ದಾರೆ, ಆದರೆ ನಮಗೆ ಬೇಕಾಗುರುವುದು ಸಚ್ (ನಿಜ) ಭಾರತ ಎಂದು ಹೇಳಿದ್ದರು.

LEAVE A REPLY

Please enter your comment!
Please enter your name here