ಏನಿದು ಸಂಮೋಹನ ವಿದ್ಯೆ? ಸಂಶೋಧಕರು ಇದರ ಬಗ್ಗೆ ಏನು ಹೇಳುತ್ತಾರೆ?

0
4058

ಸಂಮೋಹನ ವಿದ್ಯೆ ಮೊದಲಿನಿಂದಲೂ ಇದ್ದರೂ ಇತ್ತೀಚೆಗೆ ಹೆಚ್ಚು ಜನಪ್ರೀಯತೆಗೆ ಬಂದಿದೆ. ಇದರಿಂದ ಹಲವರು ತಮ್ಮ ಸಮಸ್ಯೆಗಳಾದ ಖಿನ್ನತೆ, ಆತಂಕ, ದುಗುಡುತನ ಇತ್ಯಾದಿಗಳಿಂದ ಪ್ರಯೋಜನಗಳನ್ನು ಪಡೆದಿರುತ್ತಾರೆ. ಸಂಮೋಹನವೆಂದರೆ ಒಬ್ಬ ವ್ಯಕ್ತಿಯನ್ನು ಒಂದೇ ಕಡೆ ಕೇಂದ್ರಿತಗೊಳಿಸಿ ಇನ್ನೊಬ್ಬರ ನಿರ್ದೇಶನದಂತೆ ನಡೆಸುವುದು.

ವ್ಯಕ್ತಿ ಸಂಮೋಹನದಿಂದ ಪ್ರಭಾವಿತಗೊಂಡಾಗ – ಮೆದುಳು ಕೇಂದ್ರೀಕರಿಸಿದ ಗಮನವನ್ನು ಮತ್ತು ಬಾಹ್ಯ ಜಾಗೃತಿಯನ್ನು ಕಡಿಮೆಗೊಳಿಸಿ ಟ್ರಾನ್ಸ್ ತರಹದ ಲೋಕಕ್ಕೆ ಒಳ ಪಟ್ಟು- ಇದು ಹೊಸ ಚಟುವಟಿಕೆಗಳ ಪ್ರಕಾರ, ಮತ್ತು ಸರಳವಾದ ಗ್ರಹಿಕೆ ಇನ್ನೂ ನಡೆಯುತ್ತಿದ್ದರೂ, ಅದರ ಚಟುವಟಿಕೆಗಳಲ್ಲಿ ತೀವ್ರವಾದ ಕಡಿತವನ್ನು ಮಾಡುತ್ತದೆ.

‘ನಮ್ಮ ಅಧ್ಯಯನದ ಪ್ರಕಾರ, ಮೆದುಳು ಹೇಗೆ ಸಂಮೋಹನ ಸ್ಥಿತಿಯನ್ನು ಸಾಧ್ಯಗೊಳಿಸುತ್ತದೆ ಎಂಬುದನ್ನು ನಾವು ನೋಡುತ್ತಿದ್ದೇವೆ’ ಎಂದು ಜರ್ಮನಿಯ ಜೆನಾದಲ್ಲಿನ ಫ್ರೆಡ್ರಿಕ್ ಷಿಲ್ಲರ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ವೂಲ್ಫ್ಗ್ಯಾಂಗ್ ಮಿಲ್ಟ್ನರ್ ಹೇಳಿದರು.

ಆವಿಷ್ಕಾರಗಳು ಸಂಮೋಹನವು ಮೆದುಳಿನ ನಿರ್ದಿಷ್ಟ ಪ್ರದೇಶಗಳನ್ನು ಪ್ರಭಾವಿಸುತ್ತದೆ ಎಂದು ತೋರಿಸಿಕೊಟ್ಟಿತು, ಅದು ಒಂದು ದೃಶ್ಯ ಪ್ರಚೋದನೆಯನ್ನು ಪಡೆಯುತ್ತದೆ ಮತ್ತು ಎಣಿಸುವಿಕೆಯಂತಹ ಮೆದುಳಿನ ಆಳವಾದ ಪ್ರಕ್ರಿಯೆಯ ಕಾರ್ಯಚಟುವಟಿಕೆಗಳನ್ನು ಬಹಳವಾಗಿ ದುರ್ಬಲಗೊಳಿಸುತ್ತದೆ ಎಂದು ಕಂಡು ಬಂದಿದೆ.

ಸೈಂಟಿಫಿಕ್ ರಿಪೋರ್ಟ್ಸ್ ಎಂಬ ನಿಯತಕಾಲಿಕದಲ್ಲಿ ವಿವರಿಸಲಾದ ಅಧ್ಯಯನದ ಪ್ರಕಾರ ದೃಷ್ಟಿ ಪ್ರಚೋದನೆಗಳ ಪ್ರಕ್ರಿಯೆಗೆ ತಂಡವು ಹೆಚ್ಚು ಒತ್ತು ನೀಡಿ ಮತ್ತು ಭಾಗವಹಿಸಿದವರಿಗೆ ವೃತ್ತ ಅಥವಾ ತ್ರಿಕೋನದಂತಹ ವಿವಿಧ ಸಂಕೇತಗಳನ್ನು ಹೊಂದಿರುವ ಪರದೆಯನ್ನು ನೋಡಲು ಹೇಳಿದೆ.

ನಂತರ ನಿರ್ದಿಷ್ಟ ಚಿಹ್ನೆಯನ್ನು ಎಣಿಸುವ ಕೆಲಸವನ್ನು ಅವರಿಗೆ ನೀಡಲಾಯಿತು. ಅದೇ ಸಮಯದಲ್ಲಿ, ಅವರ ಕಣ್ಣುಗಳ ಮುಂದೆ ಮರದ ಹಲಗೆ ಇದೆ ಎಂದು ಊಹಿಸಲು ಸಹ ಅವರಿಗೆ ಹೇಳಲಾಗಿತ್ತು. ಸಲಹೆ ಸೂಚನೆಯ ಪರಿಣಾಮವಾಗಿ, ಎಣಿಕೆಯ ದೋಷಗಳ ಸಂಖ್ಯೆಯು ಗಮನಾರ್ಹವಾಗಿ ಏರಿತು, ಎಂದು ಸಂಶೋಧಕರು ಹೇಳಿದ್ದಾರೆ. ಚಿಹ್ನೆಗಳನ್ನು ಸಂಸ್ಕರಿಸುವಾಗ ಮೆದುಳಿನಲ್ಲಿ ನಡೆಯುವ ನರವ್ಯೂಹದ ಪ್ರಕ್ರಿಯೆಗಳನ್ನು ನೋಡಿದಾಗ, ಎಣಿಕೆ ಮಾಡಲ್ಪಟ್ಟ ಚಿಹ್ನೆಯ ನಿರೂಪಣೆಯಂತೆ ನಂತರ ಸುಮಾರು 400 ಮಿಲಿಸೆಕೆಂಡುಗಳಷ್ಟು ಮೆದುಳಿನ ಚಟುವಟಿಕೆಯಲ್ಲಿ ಇಳಿಕೆ ಹಾಗೂ ಶಾಂತತೆ ಕಂಡುಬಂದಿದೆ, ಆದರೂ ಇದು ಸಾಮಾನ್ಯವಾಗಿ ತುಂಬಾ ಹೆಚ್ಚು ಇರಬೇಕು ಎಂದು, ‘ಫ್ರೈಡ್ರಿಕ್ ಷಿಲ್ಲರ್ ವಿಶ್ವವಿದ್ಯಾಲಯದಿಂದ ಬಾರ್ಬರಾ ಸ್ಮಿತ್ ವಿವರಿಸಿದರು.

‘ಆದಾಗ್ಯೂ, ಇದು ಸ್ವಲ್ಪ ಸಮಯದ ಮೊದಲು – ಪ್ರಚೋದನೆಯ ಪ್ರಸ್ತುತಿಯ ನಂತರ ಸುಮಾರು 200 ಮಿಲಿಸೆಕೆಂಡುಗಳಷ್ಟು ಕಾಲ ಯಾವುದೇ ವ್ಯತ್ಯಾಸಗಳಿಲ್ಲ’ ಎಂದು ಸ್ಮಿತ್ ಹೇಳಿದರು. ಇನ್ನೂ ಸರಳ ಗ್ರಹಿಕೆ ನಡೆಯುತ್ತಿದ್ದರೂ ಕೂಡ, ಎಣಿಕೆಯಂತಹ ಆಳವಾದ ಸಂಸ್ಕರಣಾ ಕಾರ್ಯಗಳು ಬಹಳವಾಗಿ ದುರ್ಬಲಗೊಳ್ಳುತ್ತವೆ ಎಂದು ಸಂಶೋಧಕರು ಗಮನಿಸಿದ್ದಾರೆ.

source: boldsky.com

LEAVE A REPLY

Please enter your comment!
Please enter your name here