ಆನ್ ಲೈನ್ ನಲ್ಲಿ ಪ್ಯಾನ್​ಗೆ ಆಧಾರ್ ಜೋಡಿಸುವುದು ಹೇಗೆ?

0
183

ಬೆಂಗಳೂರು, ಜೂನ್ 01: Permanent Account Number (PAN) ಕಾರ್ಡ್ ಜತೆಗೆ ಆಧಾರ್ ಕಾರ್ಡ್ ಜೋಡಿಸುವುದನ್ನು ಆದಾಯ ತೆರಿಗೆ ಇಲಾಖೆ ಕಡ್ಡಾಯಗೊಳಿಸಿದೆ. ಎಸ್ಎಂಎಸ್ ಅಥವಾ ಆನ್ ಲೈನ್ ಮೂಲಕ ಆಧಾರ್ ಲಿಂಕ್ ಮಾಡುವ ವಿಧಾನ ಇಲ್ಲಿದೆ.

ತೆರಿಗೆಗಳ್ಳರಿಗೆ ಆಘಾತ ನೀಡಿರುವ ಆದಾಯ ತೆರಿಗೆ ಇಲಾಖೆ, ಈಗ ಎಲ್ಲಾ ತೆರಿಗೆದಾರರು ತಮ್ಮ ಪ್ಯಾನ್​ ಕಾರ್ಡ್​ಗೆ ಆಧಾರ್​ ಸಂಖ್ಯೆ ಜೋಡಿಸುವಂತೆ ಸೂಚಿಸಿದೆ. ಈ ಬಗ್ಗೆ ಎಲ್ಲಾ ಮಾಧ್ಯಮಗಳಲ್ಲಿ ಜಾಹೀರಾತು ನೀಡಲಾಗಿದೆ. ಆದಾಯ ತೆರಿಗೆ ಇಲಾಖೆಯು ಪ್ಯಾನ್​ ಕಾರ್ಡ್​ಗೆ ಆಧಾರ್​ ಲಿಂಕ್​ ಮಾಡಲು 567678 ಅಥವಾ 56161 ಗೆ SMS ಕಳುಹಿಸಬಹುದು.

How to Link PAN card to Aadhaar

ಪ್ಯಾನ್​ ಹಾಗೂ ಆಧಾರ್ ಲಿಂಕ್ ಮಾಡಲು ಇಲಾಖೆಯು ತನ್ನ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡುವಂತೆ ಕೋರಿದೆ. ಜುಲೈ 1, 2017ರಿಂದ ಇದು ಜಾರಿಗೆ ಬರಲಿದೆ. ವಿಧಾನ:
* ಆದಾಯ ತೆರಿಗೆ ಪಾವತಿ ವೆಬ್ ಸೈಟ್ (https://www.incometaxindiaefiling.gov.in/) ಗೆ ಭೇಟಿ ಕೊಡಿ
* ವೆಬ್ ಪುಟದ ಎಡಭಾಗದಲ್ಲಿ ಲಿಂಕ್ ಆಧಾರ್ ಎಂಬುದನ್ನು ಕ್ಲಿಕ್ ಮಾಡಿ
* ನಿಮ್ಮ ಪ್ಯಾನ್ ಸಂಖ್ಯೆ (10 ಅಂಕಿ) : A********R
* ನಿಮ್ಮ ಆಧಾರ್ ಸಂಖ್ಯೆ (12 ಅಂಕಿ) : ಉದಾ: 7***-****-***4
* ಆಧಾರ್ ಕಾರ್ಡಿನಲ್ಲಿರುವಂತೆ ಹೆಸರು ದಾಖಲಿಸಿ
* Captcha Code : ಚಿತ್ರದಲ್ಲಿರುವಂತೆ ಸಂಖ್ಯೆ, ಅಂಕಿ ದಾಖಲಿಸಿ
* link Aadhaar ಬಟನ್ ಒತ್ತಿ

 

credits :oneindiakannada

LEAVE A REPLY

Please enter your comment!
Please enter your name here