ರೈತರ ಸಾಲ ಮನ್ನಾಗೆ ಆಗ್ರಹಿಸಿ ದೆಹಲಿ ಚಲೋ ಮಾಡಿ, ನಾವು ಬರುತ್ತೇವೆ ಅಂದ್ರು ಸಿ.ಎಂ

0
115

ಬೆಂಗಳೂರು : ರೈತರ ಸಾಲ ಮನ್ನಾ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ದೆಹಲಿ ಚಲೋ ಮಾಡಿ ನಾವೂ ಬರುತ್ತೇವೆ ಅಂತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಅವರು ಇಂದು ಬಿಜೆಪಿಯ ಮಂಗಳೂರು ಚಲೋ ಬೈಕ್ ರ್ಯಾಲಿ ಕುರಿತು ಅಂಬೇಡ್ಕರ್ ಭವನದಲ್ಲಿ ಪ್ರತಿಕ್ರಿಯೆ ನೀಡಿದ ಅವರು ಇದೇ ವೇಳೆ ಸಹಕಾರ ಬ್ಯಾಂಕ್ಗಳ ಮೂಲಕ ರೈತರು ಪಡೆದಿರುವ ಸಾಲವನ್ನು 50 ಸಾವಿರ ರೂ.ಗಳ ವರೆಗೆ ನಾವು ಮನ್ನಾ ಮಾಡಿದ್ದೇವೆ.

ಅದೇ ರೀತಿ ರಾಷ್ಟ್ರೀಕೃತ ಮತ್ತು ಗ್ಯಾಮೀಣ ಬ್ಯಾಂಕ್ಗಳಲ್ಲಿ ರೈತರು ಮಾಡಿರುವ ಸಾಲ 42 ಸಾವಿರ ಕೋಟಿ ರೂ.ಗಳುಷ್ಟಿದ್ದು. ಅದನ್ನು ಮನ್ನಾ ಮಾಡುವಂತೆ ಪ್ರಧಾನಿಯವರ ಮೇಲೆ ಒತ್ತಡ ಹೇರಲು ಬಿಜೆಪಿಯವರು ದೆಹಲಿ ಚಲೋ ಮಾಡಲಿ ನಾವು ಸಹ ಕೈ ಜೋಡಿಸುತ್ತೇವೆ. ಆದರೆ ಅದನ್ನು ಬಿಟ್ಟು ಸಮಾಜದ ಶಾಂತಿ ಮತ್ತು ಸಾಮರಸ್ಯ ಹಾಳು ಮಾಡುವ, ಸಾರ್ವಜನಿಕರಿಗೆ ತೊಂದರೆ ನೀಡುವ ರ್ಯಾಲಿಗಳೇಕೆ ಬೇಕು ಎಂದು ಅವರು ಇದೇ ವೇಳೆ ಪ್ರಶ್ನಿಸಿದರು.

ಇದೇ ವೇಳೆ ಅವರು ಬೈಕ್ ರ್ಯಾಲಿ ಮಾಡಲು ಯಾರಪ್ಪನ ಅಪ್ಪಣೆಯೂ ಬೇಕಿಲ್ಲ ಎಂದು ಯಡಿಯೂರಪ್ಪ ಅವರು ಹೇಳಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಅವರು ನಾನು ಅವರಂತೆ ಏಕವಚನ ಬಳಸುವುದಿಲ್ಲ. ಅವರ ಭಾಷೆಯನ್ನು ಅನುಸರಿಸುವುದಿಲ್ಲ. ಕೆಟ್ಟ ಪದಗಳಿಂದಲೂ ಟೀಕೆ ಮಾಡುವುದಿಲ್ಲ.

ಯಡಿಯೂರಪ್ಪ ಅವರು ವೀರಾವೇಷದಿಂದ ಮಾತನಾಡಿದರೆ ಅದಕ್ಕೆ ಕಾನೂನು ರೀತ್ಯ ಉತ್ತರ ನೀಡಬೇಕಾಗುತ್ತದೆ.

ಇಷ್ಟಕ್ಕೂ ಬಿಜೆಪಿಯವರ ರ್ಯಾಲಿ ಹಿಂದೂಪರ ಅಲ್ಲ. ಅದು ಸಮಾಜ ಮತ್ತು ಸಾಮರಸ್ಯವನ್ನು ಹಾಳು ಮಾಡುವುದರ ಪರವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರ್ಯಾಲಿಯನ್ನು ಟೀಕಿಸಿದ್ದಾರೆ

Source: Dailyhunt

LEAVE A REPLY

Please enter your comment!
Please enter your name here