800 ಎಂಜಿನಿಯರಿಂಗ್ ಕಾಲೇಜು ಮುಚ್ಚಲು ಸೂಚನೆ

0
124

ಸತತ ಐದು ವರ್ಷ ಶೇ 30ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದ ದೇಶದ 800 ಎಂಜಿನಿಯರಿಂಗ್ ಕಾಲೆಜಿಗಳನ್ನು
2018-19 ನೇ ಸಾಲಿನಿಂದ ಮುಚ್ಚಲು ಸೂಚಿಸಲಾಗಿದೆ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್
ಅಧ್ಯಕ್ಷಪ್ರೊ ಅನಿಲ್ ಡಿ.ಸಹಸ್ರಬುದ್ದೆತಿಳಿಸಿದ್ದಾರೆ

ನಗರದ ಖಾಸಗಿ ವಿದ್ಯಾ ಸಂಸ್ಥೆಯೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ “ದೇಶದಲ್ಲಿ
10,363 ಎಂಜಿನಿಯರಿಂಗ್ ಕಾಲೇಜುಗಳಿವೆ. ಆದರೆ ಪ್ರತಿ ವರ್ಷ ಸಾವಿರಾರು ಸೀಟುಗಳು ಭರ್ತಿಯಗದೆ
ಹಾಗೇ ಉಳಿಯುತ್ತಿವೆ. ಕರ್ನಾಟಕದಲ್ಲಿಯೇ 2017-18ನೇ ಸಾಲಿನಲ್ಲಿ 29ಸಾವಿರ ಎಂಜಿನಿಯರಿಂಗ್
ಸೀಟುಗಳು ಭರ್ತಿಯಗದೆ ಉಳಿದಿವೆ” ಎಂದು ಹೇಳಿದರು

ಕೆಲವಡೆ ಮೂಲಭೂತ ಸೌಲಭ್ಯಗಳ ಕೊರತೆಯ ಜತೆಗೆ, ಉತ್ತಮ ಅಧ್ಯಾಪಕರ ಕೊರತೆಯೂ ಇದೆ. ಈ
ಕಾರಣದಿಂದ ವಿದ್ಯಾರ್ಥಿಗಳ ಸೇರ್ಪಡೆ ಸಂಖ್ಯೆ ಕಡಿಮೆ ಯಾಗುತ್ತಿದೆ, ಎಂದು ಅವರು ತಿಳಿಸಿದರೆ
ನೀಟ್ ಅನುಮಾನ :

ಈ ನಡುವೆ ಮುಂದಿನ ಶೈಕ್ಷಣಿಕ ವರ್ಷದಿಂದ ‘ನೀಟ್’ ಮಾದರಿಯಲ್ಲೇ ಎಂಜಿನಿಯರಿಂಗ್ ಕೋರ್ಸ್ ಗಳ
ಪ್ರವೇಶಕ್ಕೂ ಏಕರೂಪದ ಪರೀಕ್ಷೆ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಪ್ರೊ. ಅನಿಲ್ ಸಹಸ್ರಬುದ್ದೆ
ಸ್ಪಷ್ಟಪಡಿಸು ಮೂಲಕ ಈ ಕುರಿತು ಊಹಾಪೋಹಗಳಿಗೆ ತೆರೆ ಎಳೆದರು.
“ಕಳೆದ ಎರಡು ವರ್ಷಗಳಿಂದ ಎಂಜಿನಿಯರಿಂಗ್ ಕೋರ್ಸ್ ಗಳ ಪ್ರವೇಶಕ್ಕೆ ಏಕರೂಪದ ಪರೀಕ್ಷೆ ನಡೆಸಲು
ಚರ್ಚೆ ನಡೆದಿದೆ. ಆದರೆ ಸಂಪೂರ್ಣ ಸಿದ್ದತೆ ನಡೆದಿಲ್ಲ ಕಷ್ಟ 2019 ರಿಂದ ಜಾರಿಗೊಳಿಸಲು
ಉದ್ದೇಶಿಸಲಾಗಿದೆಯಾದರೂ, 2020ರಿಂದ ಸಂಪೂರ್ಣ ಜಾರಿಯಾಗುವ ಸಾಧ್ಯತೆಯಿದೆ” ಎಂದು ವಿಶ್ವಾಸ
ವ್ಯಕ್ತಪಡಿಸಿದರು

LEAVE A REPLY

Please enter your comment!
Please enter your name here