ಹರಿಪ್ರಿಯಾ ಬಿಚ್ಚಿಟ್ಟ ಥ್ರೀಡಿ ಅನುಭವ

0
2363

ಮ್ಯಾನೇಜರ್ ಇಲ್ಲದೆ ಮ್ಯಾನೇಜ್ಮಾಡೋ ಹುಡುಗಿ ಕೈಯಲ್ಲಿವೆ 7 ಸಿನಿಮಾ

ನಟಿ ಹರಿಪ್ರಿಯಾ ‘ ಮುನಿರತ್ನ ಕುರುಕ್ಷೇತ್ರ ‘ ಚಿತ್ರದ ಒಂದು ಹಾಡು ಮುಗಿಸಿಕೊಂಡು ಬಂದಿದ್ದಾರೆ.
ಹರಿಪ್ರಿಯಾ ಹಾಗೂ ದರ್ಶನ್ ಅವರ ಹಾಡಿನೊಂದಿಗೆ ‘ ಕುರುಕ್ಷೇತ್ರ’ ಚಿತ್ರೀಕರಣ ಆರಂಭವಾಗಿದೆ .
ಹರಿಪ್ರಿಯಾ ಇಲ್ಲಿ ಮಾಯೆ ಎಂಬ ಪಾತ್ರ ಮಾಡಿದ್ದಾರ. ದುರ್ಯೋಧನನ್ನು ತನ್ನ ರೂಪ, ವ್ಯೆಯ್ಯಾರ,
ನೃತ್ಯದ ಮೂಲಕ ಮರುಳು ಮಾಡುವ ಪಾತ್ರ. ಮೈಮೇಲೆ ಹತ್ತು ಕೆಜಿಗೂ ಅಧಿಕ ಆಭಾರಣಗಳೊಂದಿಗೆ
ಡ್ಯಾನ್ಸ್ ಮಾಡಿದ ಖುಷಿ ಹರಿಪ್ರಿಯಾಯಾಗಿದೆ. ಇದಕ್ಕಿಂತ ಹೆಚ್ಚಿನ ಖುಷಿ ಹಾಗೂ ಹೊಸ ಅನುಭವ
ಹರಿಪ್ರಿಯಾ ‘ಕುರುಕ್ಷೇತ್ರ’ದಿಂದ ಸಿಕ್ಕಿದೆ. ಅದು ಥ್ರೀಡಿ . ಹೌದು, ‘ಕುರುಕ್ಷೇತ್ರ’ ಥ್ರೀಡಿಯಲ್ಲಿ
ಮೂಡಿಬರುತ್ತಿರುವ ಸಿನಿಮಾ. ಇಂತಹ ಥ್ರೀಡಿ ಸಿನಿಮಾದಲ್ಲಿ ಭಾಗವಾಗಿರುವ ಹಾಗೂ ಹೂಸ ಅನುಭವ
ಪಡೆದ ಖುಷಿಯನ್ನು ಹರಿಪ್ರಿಯಾ ಹಂಚಿಕೊಳ್ಳುತ್ತಾರೆ.

‘ಕುರುಕ್ಷೇತ್ರ ನನ್ನ ಮೊದಲ ತ್ರಿದಿ ಸಿನಿಮಾ . ನನಗೆ ಅದೊಂದು ಹೊಸ ಅನುಭವ. ಸಾಮಾನ್ಯವಾಗಿ ನಾವು
ಥಿಯೇಟರ್ ಗೆ ಹೋಗಿ ಥ್ರೀಡಿ ಕನ್ನಡಕ ಹಾಕಿಕೊಂಡು ಸಿನಿಮಾ ನೋಡಿತ್ತಿವಿ. ಆದರೆ , ‘ಕುರಿಕ್ಷೇತ್ರ’
ಚಿತ್ರದಲ್ಲಿ ಮೇಕಿಂಗ್ನಲ್ಲಿ ಶಾಟ್ನೋಡುವಗಲೂ ಮಾನಿಟರ್ ಮುಂದೆ ಕುಳಿತು ಥ್ರೀಡಿ ಕನ್ನಡಕ
ಹಾಕಿಕೊಂಡೇ ನೋಡುತ್ತಿದೆವು. ಮುರು ಕ್ಯಾಮೆರಾ ಶೂಟ್ ಮಾಡಲಾಗಿದೆ. ನಾನಂತೂ ತುಂಬಾ ಎಕ್ಸಿಟ್
ಆಗಿದ್ದೆ ಎಂದು ತಮ್ಮ ಮೊದಲ ಥ್ರೀಡಿ ಅನುಭವ ಬಿಚ್ಚಿಡುತ್ತಾರೆ ಹರಿಪ್ರಿಯಾ.

ಸದ್ಯ ಹರಿಪ್ರಿಯಾ ಸಿಕ್ಕಾಪಟ್ಟೆ ಬಿಝಿ. ರಾತ್ರಿ-ಹಗಲು ಎನ್ನದೇ ಚಿತ್ರೀಕರಣದಲ್ಲಿ ಬಿಝಿಯಾಗುತ್ತಿದ್ದರೆ.
ಅವರು ಕೈಯಲ್ಲಿ ಈಗ ಬರೋಬ್ಬರಿ ಏಳು ಸಿನಿಮಾಗಳಿವೆ. ‘ಭರ್ಜರಿ’, ‘ಕನಕ’, ‘ಸಂಹಾರ’ , ‘ಕುರುಕ್ಷೇತ್ರ.’.
‘ಅನ್ಜನಿಪುತ್ರ’, ‘ ಸುಜಿದಾರೆ’, ‘ಲೈಫ್ ಜೊತೆಗೆ ಒಂದು ಸೆಲ್ಫಿ’ ಸಿನಿಮಾಗಳಲ್ಲಿ ಹರಿಪ್ರಿಯಾ ಇದ್ದಾರೆ
ಇಷ್ಟೆಲ್ಲಾ ಸಿನಿಮಾಗಳಿಗೆ ಡೇಟ್ಸ್ ಹೇಗೆ ಹೊಂದಿಸುತ್ತೀರಿ ಎಂದರೆ. ‘ನನಗೆ ಮಾನೇಜರ್ ಇಲ್ಲ ಆಲ್ವಾ,
ಅದಕ್ಕೆ ಮ್ಯಾನೆಜ್ ಹಾಕ್ತ ಇದೆ’ ಎಂದೇಳಿ ನಗುತ್ತಾರೆ. ಹೌದು, ಹರಿಪ್ರಿಯಾ ಮ್ಯಾನೇಜರ್
ಇಟ್ಟುಕೊಂಡಿಲ್ಲ . ಆದರು ಯಾವುದೇ ಸಿನಿಮಾಗಳಿಗೂ ತೊಂದರೆಯಾಗದಂತೆ ಡೇಟ್ಸ್ ಹೊಂದಿಸುತ್ತಿರುವ
ಖುಷಿ ಅವರಿಗೆದೆ.

LEAVE A REPLY

Please enter your comment!
Please enter your name here