ಗೃಹ ಸಚಿವರಾದ ರಾಮಲಿಂಗಾರೆಡ್ಡಿ ಪೋಲಿಸ್ ಅಧಿಕಾರಿಗಳಿಗೆ ಕೊಟ್ಟ ಮೊದಲ ‘ಕ್ಲಾಸ್’ ಎನು ಅಂತಾ ಗೊತ್ತ

0
139
“ಇನ್ ಸ್ಪೆಕ್ಟರ್ಗಳು ಖಡಕ್ ಆಗಿದ್ದರೆ ಪುಂಡಾಟಿಕೆ ಗೊಂಡಾಗಿರಿ, ಹಫ್ತಾ ವಸೂಲಿ, ಅಕ್ರಮ ದಂಧೆಕೋರರು ಖಂಡಿತಾ ಬಾಲಬಿಚ್ಚಲ್ಲ. ತಾಣಾನ ಹಂತದಲ್ಲೇ ಆಂತರಿಕ   ಗುಪ್ತಚರ ವ್ಯವಸ್ಥೆ ಬಲಪಡಿಸಿ ರಾತ್ರಿ ಗಸ್ತು ವ್ಯವಸ್ಥೆ ಹೆಚ್ಚಿಸಿ ಸಮರ್ಪಕ ರೀತಿಯಲ್ಲಿ ಕಾನೂನು –ಸುವ್ಯವಸ್ಥೆ ಕಾಪಾಡುವ ಮೂಲಕ ಸಾರ್ವಜನಿಕರು ನೆಮ್ಮದಿಯಾಗಿ ಬದುಕುವಂತೆ  ಕಾರ್ಯನಿರ್ವಹಿಸಿ” ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಗೃಹ  ಸಹಿವರಾಗಿ   ಹಿರಿಯ ಅಧಿಕಾರಿಗಳ ಸಭೆ ನಡೆಸಿ, ಉಳಿದಂತೆ ಶ್ರೇಣೀಕೃತ ವ್ಯವಸ್ಥೆಯ ಸಭೆಗಳ ಮೂಲಕ ಸೂಚನೆ,ನಿರ್ದೇಶನ ನಿಡುವ ಈವರಿಗಿನ ಸಂಪ್ರದಾಯಕ್ಕೆ ರಾಮಲಿಂಗಾರೆಡ್ಡಿ  ವಿದಾಯ ಹೇಳಿದರು. ವಿದನಸೌಧದಲ್ಲಿ ಶನಿವಾರ ಇನ್ಸ್ಪೆಕ್ಟರ್ ಹಂತದ ವರೆಗಿನ 200ಕ್ಕೂ ಹೆಚ್ಚು ಎಲ್ಲ ಅಧಿ ಕಾರಿಗಳೊಂದಿಗೆ ಮೊದಲ ಸಭೆ ನಡಿಸಿದರು.
“ನಾನು ಅಧಿಕಾರಿಗಳಿಗೆ ಮುಕ್ತ ಸ್ವತಂತ್ಯ್ರ ನೀಡುತ್ತೇನೆ. ಆದರೆ, ಕರ್ತವ್ಯ ಲೋಪ ಅಥವಾ ತಪ್ಪು ಮಾಡಿ ಇನ್ ಪ್ಲುಯೇನ್ಸ್ ತಂದರೆ ಖಂಡಿತವಾಗಿ ರಕ್ಷಣೆ ಸಿಗುವುದ್ದಿಲ್ಲ” ಎಂದು  ಸ್ಪಷ್ಟ ಎಚ್ಚರಿಕೆ ನೀಡಿದರು.
ಮಧ್ಯ ಪ್ರವೇಶ ಬೇಡ :
“ಯಾವುದೇ ಕಾರಣಕ್ಕೂ ಸಿವಿಲ್ ಪ್ರಕರಣಗಳಲ್ಲಿ ಮಧ್ಯಪ್ರವೆಶಿಸಬೇಡಿ”  ಎಂದು ಸ್ಪಷ್ಟಸೂಚನೆ ನೀಡಿದರು.
“ಮದ್ಯದಂಗಡಿಗಳು ಬೆಳಗ್ಗೆ 8 ಗಂಟೆಗೇ ಬಾಗಿಲು ತೆರೆಯುತ್ತೇವೆ. ರಾತ್ರಿ 11ರ ನಂತರವೂ ತೆರೆದಿರುತ್ತವೆ. ಇದು ಮುಂದುವರಿಯಬಾರದು ಪೇಯಿಂಗ್ ಗೆಸ್ಟ್ ಗಳಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಯದಂತೆ ಮಾಲೀಕರಲ್ಲಿ ಮುಚ್ಚಳಿಕೆ ಬರೆಸಿಕೊಳ್ಳಬೇಕು. ವಿದೇಶಿ ಹಾಗೂ ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳು ಪುಂಡಾಟಿಕೆ ಮೇಲೆ ನಿಗಾ ಇಡಿ. ಮಾದಕದ್ರವ್ಯ ಮಾರಾಟ ಜಾಲವನ್ನು ಹತ್ತಿಕ್ಕಿ” ಎಂದರು
“ ವೇಶ್ಯಾವಾಟಿಕೆ, ಬೆಟ್ಟಿಂಗ್ , ಓಸಿ ದಂಧೆಗೆ ಕಡಿವಾಣ ಹಾಕಬೇಕು. ಅತ್ಯಾಚಾರ ಮತ್ತು ಲ್ಯೆಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು ಮತ್ತು ಇಂತವರ ವಿರುದ್ದ ಪೋಸ್ಕೋ ಕಾಯಿದೆ ಬಳಕೆ ಮಾಡಬೇಕು. ಮಹಿಳೆ ಮತ್ತು ಮಕ್ಕಳನ್ನು ಬಳಸಿಕೊಂಡು ಭಿಕ್ಷಾಟನೆ ತಡಬೇಕು ಮತ್ತು ಅದರ ಹಿಂದಿರುವ ಜಾಲವನ್ನು ಭೇದಿಸಲು ಮುಂದಾಗ ಬೇಕು” ಎಂದು ನಿರ್ದೇಶನ ನೀಡಿದರು.

LEAVE A REPLY

Please enter your comment!
Please enter your name here