ಸ್ವಾಮಿ ವಿವೇಕಾನಂದ ಭಾರತದ ಭವ್ಯತೆಯನ್ನು ಸಾರಿದ ಆ ಕ್ಷಣಗಳು ಭಾಗ 1

0
118

ಭಾರತದಲ್ಲೆಲ್ಲ ಸುತ್ತಿದ ನಂತರ 1892ರ ಡಿ.24ರಿಂದ ಮೂರೂ ದಿನ ಕನ್ಯಾಕುಮಾರಿಯ ಬಂಡೆಯ ಮೇಲೆ ಕುಳಿತು ಧ್ಯಾನ ಮಾಡಿದ ವಿವೇಕಾನಂದರಿಗೆ ಮುಂದಿನ ಗುರಿ ನಿಶ್ಚಯವಾಗಿತ್ತು. ಅಲ್ಲಿಂದ ಹೊರಟು ಪಾಂಡಿಚೆರಿ, ಮದ್ರಸ್ನಲ್ಲಿ ಹಲವರ ಸಂಪರ್ಕ ಮಾಡಿದರು.  ಸಾಮಾನ್ಯರು ವಿದ್ಯಾರ್ಥಿಗಳ ಜತೆ ಸಂಭಾಷಣೆ ನಿರಂತರ ನಡೆಯುತ್ತಿತ್ತು. 31ರ ಹರೆಯದ ಯುವಕನ ಕತ್ತುವಸ್ತು ದೇಹ, ವ್ಯೆಚಾರಿಕ ಸ್ಪಷ್ಟತೆ, ಪ್ರಾಮಾಣಿಕ ದೇಶಪ್ರೇಮ ಕಂಡು ಯುವಸಮೂಹ ಮೊಡಿಗೊಳಗಾಗಿತ್ತು.

ಆದರೆ ಅದೇ ವೇಳೆ ಭಾರತೀಯ ಸಂಸ್ಕ್ರತಿಯ ಕುರಿತು ಜನರಲ್ಲಿ. ಯುವಕರಲ್ಲಿರುವ ಮೌಡ್ಯ, ಅಸ್ಪಷ್ಟತೆ ನಿಕೃಷ್ಟತೆ ಕಂಡು ಸ್ವಾಮೀಜಿ ಬೇಸರ ಗೊಂಡಿದ್ದರು. ಸ್ವತಃ ತಮ್ಮ ಶಿಷ್ಯರನ್ನು ಕಾರ್ಯದಲ್ಲಿ ತೊಡಗಿಸಲಲೂ ಅನೇಕ ಹಂತ ಕೆಳಗಿಳಿದು ವಿವರಿಸುವ  ಅಗತ್ಯತೆ ಬರುತ್ತಿತ್ತು. ಆ ವೇಳೆಗಾಗಲೆ ಅಮೇರಿಕ ಪ್ರವಾಸ ಕೈಗೊಳ್ಳುವ ಇಚ್ಛೆಯನ್ನು ಶಿಷ್ಯರಲ್ಲಿ ವಿವೇಕಾನಂದರು ವ್ಯಕ್ತಪಡಿಸಿದರು.

‘ನಮ್ಮ ಧರ್ಮವನ್ನು ಪ್ರಸಾರ ಮಾಡವ ಅಗತ್ಯ ಈಗ ಇದೆ. ಸನಾತನ ಮಹರ್ಷಿಗಳಿ೦ದ ರೂಪುಗೊಂಡು ಹಿಂದೆ ಧರ್ಮ ಎಚ್ಚೆತ್ತು ಚಲನಶೀಳವಾಗಬೇಕಾದ  ಕಾಲ ಸನ್ನಿಹಿತವಾಗಿದೆ. ಪರರಾಷ್ಟ್ರಿಯರು ನಮ್ಮ ಸನಾತನ ಧರ್ಮವನ್ನು ಧ್ವಂಸಮಾಡಲು ತುದಿಗಾಲಲ್ಲಿ  ನಿಂತಿರುವಾಗ ನೋಡುತ್ತಾ ಕುಳಿತಿರಬೇಕೆ ? ನಮ್ಮ ಪೂರ್ವಿಕರಂತೆ ಧರ್ಮದ ವ್ಯೆಶಿಷ್ಟವನ್ನು ವಿಶ್ವಾದ್ಯಂತ ಸಾರೋಣವೇ ಇಲ್ಲ ಕೂಪ ಮಂಡೋಕಗಳಂತೆ ಅವಿತಿತ್ತುಕೊಂದಿರೋಣವೇ ?  ಜಗತ್ತಿನ ಇತರೆ ರಾಷ್ಟ್ರಗಳ ನಡುವೆ ತಲೆಯೆತ್ತಿ ನಿಂತು ಭಾರತ ಅಭಿವ್ರುದ್ದಿಗಳಿಗೆ ನೆರವು ನೀಡುವಂತೆ ಪ್ರಭಾವ ಬೀರಬೇಕು’ ಎಂದು ಹೇಳುತ್ತಿದ್ದರು.

LEAVE A REPLY

Please enter your comment!
Please enter your name here