ಶಶಿಕಲಾ,ದಿನಕರನ್ ವಜಾರಾದ್ರ ? ಎಐಎಡಿಎಂಕೆ ಕೌನ್ಸಿಲ್ ಸಭೆಯಲ್ಲಿ ಮಹತ್ವ ನಿರ್ಧಾರ

0
106

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಆಡಳಿತಾರೂಢ ಎಐಎಡಿಎಂಕೆ, ಪಕ್ಷದ ಪ್ರದಾನ ಕಾರ್ಯದರ್ಶಿ ಹುದ್ದೆಯಿಂದ ಶಶಿಕಲಾ ಅವರನ್ನು ಮಂಗಳವಾರ ವಜಾಗೊಳಿಸಿದೆ. ಉಪ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಅವರನ್ನೂಪದಚ್ಯುತಿಗೊಳಿಸಲಾಗಿದೆ . ಮಾಜಿ ಸಿಎಂ. ದಿ. ಜಯಲಲಿತಾ ಅವರನ್ನು ಶಾಶ್ವತ ಪ್ರಧಾನ ಕಾರ್ಯದರ್ಶಿ ಎಂದು ಘೋಷಿಸಲಾಗಿದ್ದು.  ಪಕ್ಷ ಮುನ್ನಡೆಸಲು ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ.

ತಮಿಳುನಾಡು ಆಡಳಿತಾರೂಢ ಎಐಎಡಿಎಂಕೆಯ ಹಂಗಾಮಿ ಪ್ರಧಾನ  ಪ್ರಧಾನ ಕಾರ್ಯದರ್ಶಿ.

ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಪ್ರಸ್ತುತ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಲ್ಲಿರುವ ವಿ.ಕೆ  ಶಶಿಕಲಾ ಹಾಗೂ ಅವರ ಸಂಬಂದಿ ಮತ್ತುಪಕ್ಷದ ಉಪಪ್ರಧಾನ ಕಾರ್ಯದರ್ಶಿ  ಟಿಟಿವಿ ದಿನಕರನ್ ಅವರನ್ನು ಕೊನೆಗೂ ಪಕ್ಷದ ಉನ್ನತ   ಸ್ಥಾನದಿಂದ   ಪದಚ್ಯುತ ಗೊಳಿಸಲಾಗಿದೆ. ಚೆನೈನ ಹೊರ ವಲಯದ ವನಗರಂನಲ್ಲಿ ಮಂಗಳವಾರ ನಡೆದ ಪಕ್ಷದ ಕೌನ್ಸಿಲ್ ಸಭೆಯಲ್ಲಿ  ಸಿಎಂ ಪಳನಿಸಾಮಿ ಹಾಗೂ ಡಿಸಿಎಂ ಪನ್ನೀರ್ ಸೆಲ್ವಂ ಬಣದ ಶಾಸಕರು, ಮುಖಂಡರು ಶಶಿಕಲಾ ತಲೆತಂಡಕ್ಕೆ ಒಕ್ಕೊರಲಿನ ನಿರ್ಧಾರ ಕೈಗೊಂಡರು.

ಮಾಜಿ ಸಿಎಂ. ದಿವಂಗತ ಜಯಲಲಿತಾ ಅವರನ್ನು ಶಾಶ್ವತ ಪ್ರಧಾನ ಕಾರ್ಯದರ್ಶಿ ಎಂದು ಘೋಷಣೆ ಮಾಡಲಾಗಿದ್ದು, ಪಕ್ಷವನ್ನು ಮುನ್ನಡೆಸಲು ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ಪಕ್ಷದ ಹಿರಿಯ ನಾಯಕ ಒ. ಪನ್ನೀರ್ ಸೆಲ್ವಂ ಸಮಿತಿಯ ಮುಖ್ಯ ಸಮನ್ವಯಕಾರಾಗಿದ್ದು. ಪಳನಿಸಾಮಿ ಜಂಟಿ ಸಮನ್ವಯಕಾರರಾಗಿ ಕೆಲಸ ಮಾಡಲಿದ್ದಾರೆ.

LEAVE A REPLY

Please enter your comment!
Please enter your name here