ಜೈ ಜಪಾನ್ – ಜೈ ಭಾರತ್ ಎಂದರು ಜಪಾನ್ ಪ್ರಧಾನಿ ಅಬೆ!

0
107

ನವದೆಹಲಿ:-

ಎರಡು ದಿನಗಳ ಕಾಲ ಭಾರತ ಪ್ರವಾಸದಲ್ಲಿರುವ ಜಪಾನ್ ಶಿಂಜೋ ಅಬೆ ಉಭಯ  ರಾಷ್ಟ್ರಗಳ ಅಭಿವೃದ್ಧಿಯಲ್ಲಿ ಮೊದಲನೇ ಮೆಟ್ಟಿಲಾಗಿ ಇಂದು ಐತಿಹಾಸಿಕ ಬುಲೆಟ್ ಟ್ರೈನ್ಗೆ ಶಂಕು ಸ್ಥಾಪನೆ ನೆರವೇರಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸೇರಿ ಗುಜರಾತ್ ನ ಅಹಮದಾಬಾದ್ನಲ್ಲಿ ಬುಲೆಟ್ ಟ್ರೈನ್ ಗೆ ಶಿಲಾನ್ಯಾಸ ನೆರವೇರಿಸಿದರು. ನಂತರ ಉಭಯ ರಾಷ್ಟ್ರಗಳ ಅಭಿವೃದ್ಧಿಯನ್ನು ಉದ್ದೇಶಿಸಿ ಜಪಾನ್ ಪ್ರಧಾನಿ ಶಿಂಜೋ ಅಬೆ ಮಾತನಾಡಿದರು .

ಶಿಂಜೋ ಅಬೆ ಭಾಷಣದ ಪ್ರಮುಖಾಂಶಗಳು :

# ನಮಸ್ಕಾರ ಎಂದು ಹಿಂದಿಯಲ್ಲಿ ಭಾಷಣ ಆರಂಭಿಸಿದ ಜಪಾನ್ ಪ್ರಧಾನಿ ಶಿಂಜೋ ಅಬೆ

# ಈ ಯೋಜನೆ ಉಭಯ ರಾಷ್ಟ್ರಗಳ  ಬಾಂಧವ್ಯ ಸೂಚಿಸಲಿದೆ. ನಮ್ಮ ಬಾಂಧವ್ಯಕ್ಕೆ ಹೊಸ ಅಧ್ಯಾಯವಾಗಲಿದೆ. ಜಪಾನ್ ನಿಂದ 100 ಇಂಜಿನಿಯರ್ಗಳು ಬುಲೆಟ್ ಟ್ರೈನ್ ಕಾಮಗಾರಿಗಾಗಿ ಭಾರತಕ್ಕೆ ಬಂದಿದ್ದಾರೆ ಎಂದರು.

# ಪ್ರಧಾನಿ ಮೋದಿ ದುರದ್ರುಷ್ಟಿಯುಳ್ಳ ನಾಯಕರಾಗಿದ್ದಾರೆ. ಮೇಕ್ ಇನ್ ಇಂಡಿಯಾಗೆ ನಾವು ಕೈ ಜೋಡಿಸುತ್ತೇವೆ. ಇಂದು ಭಾರತ – ಜಪಾನ್ ಗೆ ಐತಿಹಾಸಿಕ ದಿನ ಎಂದು ಭರವಸೆ ನೀಡಿದರು.

# ಮೋದಿ ಜಾನಗತಿಕ, ಗ=ದುರದ್ರುಷ್ಟಿಯುಳ್ಳ ನಾಯಕ. ಮೋದಿ ನವಭಾರತ ನಿರ್ಮಾಣದಲ್ಲಿ ತೊಡಗಿದ್ದಾರೆ ಎಂದ ಮೋದಿಯನ್ನು ಕೊಂಡಾಡಿದರು.

# ಭಯೋತ್ಪಾದನೆ ನಿಗ್ರಹಕ್ಕೆ ಭಾರತದ ಜತೆ ಜಪಾನ್ ಕೈ ಜೋಡಿಸಲಿದೆ. ಉಭಯ ರಾಷ್ಟ್ರಗಳ ಅಭಿವೃದ್ಧಿಗೆ ಪರಸ್ಪರ ಸಹಕಾರ ಸಿಗಲಿದೆ ಎಂದ ಅವರು.ಭವಿಷ್ಯದಲ್ಲಿ ಭಾರತದಾದ್ಯಂತ ಬುಲೆಟ್ ಟ್ರೈನ್ ಸಂಚಾರ ಮಾಡಲಿದೆ ಎಂದು ಹೇಳು ಮೂಲಕ ಭಾರತದ ಮುಂದಿನ ಚಿತ್ರಣವನ್ನು ವಿವರಿಸಿದರು .

# ವಿವಾದಗಳನ್ನ ಶಾಂತಿಯುತವಾಗಿ ಪರಿಹರಿಸಿಕೊಳ್ಳುವ ರಾಷ್ಟ್ರಗಳು ಭಾರತ – ಜಪಾನ್.ಏಷ್ಯಾದಲ್ಲೇ ಬಲಪ್ರಯೋಗದ ಮೂಲಕ ಅಲ್ಲದೆ ಶಾಂತಿ ಮಾರ್ಗ ಹಿಡಿದ ರಾಷ್ಟ್ರಗಳು ಎಂದು ಹೇಳುವ ಮೂಲಕ ಚೀನಾಗೆ ಪರೋಕ್ಷ ಟಾಂಗ್ ನೀಡಿದ ಜಪಾನ್ ಪ್ರಧಾನಿ ಶಿಂಜೋ ಅಬೆ.

# ಭಾಷಣದ ಕೊನೆಯಲ್ಲಿ ಜೈ ಜಪಾನ್ ಜೈ ಭಾರತ ಎಂದ ಜಪಾನ್ ಪ್ರಧಾನಿ ಶಿಂಜೋ ಅಬೆ.

LEAVE A REPLY

Please enter your comment!
Please enter your name here