ಕೊಡಾಕ್ನಿಂದ ಸಂಗೀತ ಪ್ರೇಮಿಗಳಿಗಾಗಿ ಪೋರ್ಟೇಬಲ್ ಸ್ಪೀಕರ್

0
146

ಕೊಡಾಕ್ ಕಂಪೆನಿಯು ಪೋರ್ಟೇಬಲ್ ಸ್ಪೀಕರ್ ಅನ್ನು ಜಾರಿಗೆ ತಂದಿದ್ದು, ಧ್ವನಿಯ ಸಂಪೂರ್ಣ ಅನುಭವವನ್ನು ನೀಡುವ ಈ ಸ್ಪೀಕರ್ ಅನ್ನು ರೂ 3,290 ಕ್ಕೆ ಲಾಂಚ್ ಮಾಡಿದೆ. ಬಜೆಟ್ ಬೆಲೆಯ ಸ್ಪೀಕರ್ ಬ್ಲೂಟೂತ್ ಸಂಪರ್ಕವನ್ನು ಹೊಂದಿದ್ದು ವಯರ್ ಮತ್ತು ಮೈಕ್ರೋ ಯುಎಸ್ಬಿ ಜ್ಯಾಕ್ಗೆ ಬೆಂಬಲವನ್ನು ನೀಡಲಿದೆ. ಇದು 5 ಗಂಟೆಗಳ ದೀರ್ಘ ಬ್ಯಾಟರಿ ಬಾಳಿಕೆಯನ್ನು ನೀಡುತ್ತಿದ್ದು, ಹೆಚ್ಚುವರಿ ಸ್ಪೀಕರ್ಗೆ ಇದನ್ನು ಸಂಪರ್ಕ ಪಡಿಸಬಹುದಾಗಿದೆ ಇದರಿಂದ ಧ್ವನಿಯ ಅತ್ಯಮೂಲ್ಯ ರಂಜನೆಯನ್ನು ಬಳಕೆದಾರರು ಪಡೆಯಬಹುದಾಗಿದೆ.

ಸ್ಪೀಕರ್ಗಳು ಸುಂದರ ವಿನ್ಯಾಸವನ್ನು ಹೊಂದಿದ್ದು, ಇಂದಿನ ಟೆಕ್ ಜನರೇಶನ್ಗೆ ಹೊಂದುವಂತೆ ನಿರ್ಮಿತವಾಗಿದೆ. ಇಂಡಿಯಾದ ಸೂಪರ್ ಪ್ಲಾಸ್ಟ್ರೋನಿಕ್ಸ್ ಪ್ರೈವೇಟ್ ಲಿಮಿಟೆಡ್ನ ಸಿಇಒ ಮತ್ತು ಡೈರೆಕ್ಟರ್ ಅವನೀತ್ ಸಿಂಗ್ ಸ್ಪೀಕರ್ ಬಗ್ಗೆ ಹೇಳಿದ್ದು ನಮ್ಮ ಕುಟುಂಬಕ್ಕೆ ಹೊಸ ಸದಸ್ಯನನ್ನು ನಾವು ಸ್ವಾಗತಿಸುತ್ತಿದ್ದು ಪೋರ್ಟೇಬಲ್ ಬ್ಲ್ಯೂಟೂತ್ ಟಿವಿ ಸ್ಪೀಕರ್ ಇದಾಗಿದೆ.

ನಮ್ಮ ಸ್ಪೀಕರ್ಗಳ ಮಟ್ಟವನ್ನು ನಾವು ಹೆಚ್ಚಿಸಲಿದ್ದು ಸೌಂಡ್ ಬಾರ್ಗಳಾಗಿ ನಾವು ಮಾರ್ಪಡಿಸಲಿದ್ದೇವೆ. ಇಲೆಕ್ಟ್ರಾನಿಕ್ಸ್ ಉತ್ಪನ್ನಗಳ ವಿಷಯಕ್ಕೆ ಬಂದಾಗ ಗ್ರಾಹಕರ ಆಸಕ್ತಿಯನ್ನು ಗಮನಿಸಿಯೇ ನಾವು ಉತ್ಪನ್ನವನ್ನು ಸಿದ್ಧಪಡಿಸುತ್ತೇವೆ ಎಂದವರು ನುಡಿದಿದ್ದಾರೆ’.

ಸ್ಪೀಕರ್ 4.0 ಇಡಿಆರ್ ಬ್ಲ್ಯೂಟೂತ್ ಅನ್ನು ಹೊಂದಿದ್ದು ಶಕ್ತಿಯುತ 10 ಡಬ್ಲ್ಯೂ ಸೌಂಡ್ ಔಟ್ಪುಟ್ ಅನ್ನು ಪಡೆದುಕೊಂಡಿದೆ. ಇದು 10 ಮೀಟರ್ಗಳ ದೂರಕ್ಕೂ ಕೇಳಿಸಲಿದೆ. ಸ್ಪೀಕರ್ ಅನ್ನು ಯಾವುದೇ ಟಿವಿಗೆ ಸಂಪರ್ಕಪಡಿಸಬಹುದು ಬ್ಲೂಟೂತ್ ಇಲ್ಲದೆಯೇ ಸಂಪರ್ಕಪಡಿಸಬಹುದು ಮತ್ತು ಇದನ್ನು ವಿಶೇಷವಾಗಿ ಸಂಗೀತ ಪ್ರೇಮಿಗಳಿಗಾಗಿ ಸಿದ್ಧಪಡಿಸಲಾಗಿದೆ. ಇದರ ವಿನ್ಯಾಸ ಮತ್ತು ವೈರ್ಲೆಸ್ ಬ್ಲೂಟೂತ್ ವ್ಯವಸ್ಥೆಯು ನೀವು ಹೋದಲ್ಲೆಲ್ಲಾ ಇದನ್ನು ಕೊಂಡೊಯ್ಯಲು ಅನುವು ಮಾಡಿಕೊಡಲಿದೆ ಜೊತೆಗೆ ಮನರಂಜನೆಯನ್ನು ಪಡೆಯಬಹುದಾಗಿದೆ.

ಎಲ್ಲಾ ಪ್ರಮುಖ ಇ ಕಾಮರ್ಸ್ ತಾಣಗಳಾದ ಫ್ಲಿಪ್ಕಾರ್ಟ್, ಅಮೆಜಾನ್ ಮತ್ತು ಪೇಟಿಎಮ್ನಲ್ಲಿ ಇದು ಲಭ್ಯವಿದೆ.

source: gizbot.com

LEAVE A REPLY

Please enter your comment!
Please enter your name here