ಗುಜರಾತ್ ರಾಜ್ಯಸಭೆ ಚುನಾವಣೆ: “ಕೈ”ಗೆ ಬಿಸಿ ಮುಟ್ಟಿಸಿದ ರೆಬೆಲ್ ಶಾಸಕರಿಂದ ಬಿಜೆಪಿಗೆ ಮತ!

0
170

ಅಹ್ಮದಾಬಾದ್: ಕದನ ಕುತೂಹಲ ಕೆರಳಿಸಿರುವ ಗುಜರಾತ್ ರಾಜ್ಯಸಭೆ ಚುನಾವಣೆಯಲ್ಲಿ ಈ ಹಿಂದೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ತೊರೆದಿದ್ದ ರೆಬೆಲ್ ಶಾಸಕರು ಇದೀಗ ಆ ಪಕ್ಷಕ್ಕೆ ಮತ್ತೊಂದು ಶಾಕ್ ನೀಡಿದ್ದು, ಬಿಜೆಪಿ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕಿರುವುದಾಗಿ ಬಹಿರಂಗ ಹೇಳಿಕೆ ನೀಡಿದ್ದಾರೆ.

ಈ ಹಿಂದೆ ಕಾಂಗ್ರೆಸ್ ತೊರೆದಿದ್ದ ಹಿರಿಯ ನಾಯಕ ಶಂಕರ್ ಸಿನ್ಹ್ ವಾಘೇಲಾ, ಶಾಸಕ ರಾಘವ್ಜೀ ಪಟೇಲ್ ಹಾಗೂ ಧರ್ಮೇಂದ್ರ ಜಡೇಜಾ ಅವರು ಬಿಜೆಪಿಯ ಬಲವಂತ್ ಸಿನ್ಹ್ ರಜಪೂತ್ ಅವರಿಗೆ ಮತ ಹಾಕಿರುವುದಾಗಿ ಹೇಳಿಕೊಂಡಿದ್ದಾರೆ. ಗುಜರಾತ್ ವಿಧಾನಸಭೆಯಲ್ಲಿ ನಡೆದ ಮತದಾನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಂಕರ್ ಸಿನ್ಹ್ ವಾಘೇಲಾ ಅವರು, ಸೋಲುವ ಅಭ್ಯರ್ಥಿಗೆ ಮತ ನೀಡಿದರೆ ತಮ್ಮ ಮತ ವ್ಯರ್ಥವಾಗುತ್ತದೆ. ಹೀಗಾಗಿ ತಾವು ಬಿಜೆಪಿಯ ಬಲವಂತ್ ಸಿನ್ಹ್ ರಜಪೂತ್ ಅವರಿಗೆ ಮತ ಹಾಕಿರುವುದಾಗಿ ಹೇಳಿಕೊಂಡಿದ್ದಾರೆ.

ಅಂತೆಯೇ ರಾಘವ್ಜೀ ಪಟೇಲ್ ಅವರು ಮಾತನಾಡಿ ಗುಜರಾತ್ ನಲ್ಲಿ ಇರುವುದೇ 2 ಪ್ರಮುಖ ಪಕ್ಷಗಳು. ಒಂದು ಕಾಂಗ್ರೆಸ್ ಮತ್ತೊಂದು ಬಿಜೆಪಿ. ನಾನು ಕಾಂಗ್ರೆಸ್ ಗೆ ಮತ ನೀಡಿಲ್ಲ ಎಂದರೆ ಉಳಿದ ಬಿಜೆಪಿ ಪಕ್ಷಕ್ಕೇ ತಾನೇ ನನ್ನ ಮತ ಹೋಗಿರುತ್ತದೆ. ನಾನು ರಾಜಕೀಯದಲ್ಲಿ ಉಳಿಯಲು ಬಯಸುತ್ತೇನೆಯೇ ಹೊರತು ಕಾಂಗ್ರೆಸ್ ನಲ್ಲಿ ಅಲ್ಲ. ಹೀಗಾಗಿ ನಾನು ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ್ದೇನೆ ಎಂದು ಹೇಳಿದ್ದಾರೆ.

ಇನ್ನು ಮತ್ತೋರ್ವ ಶಾಸಕ ಧರ್ಮೇಂದ್ರ ಜಡೇಜಾ ಅವರು ಮಾತನಾಡಿ, ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ನಮ್ಮ ಕೂಗು ಕೇಳುತ್ತಿಲ್ಲ. ಹೀಗಾಗಿ ನಾನು ಬಿಜೆಪಿ ಅಭ್ಯರ್ಥಿ ಬಲವಂತ್ ಸಿನ್ಹ್ ರಜಪೂತ್ ಅವರಿಗೆ ಮತಹಾಕಿದ್ದೇನೆ ಎಂದು ಧರ್ಮೇಂದ್ರ ಜಡೇಜಾ ಹೇಳಿದ್ದಾರೆ.

182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ಪ್ರಸ್ತುತ ನಡೆಯುತ್ತಿರುವ ರಾಜ್ಯಸಭೆ ಚುನಾವಣೆಯಲ್ಲಿ 176 ಮಂದಿ ಮತದಾನ ಮಾಡುವ ಹಕ್ಕನ್ನು ಹೊಂದಿದ್ದು, ಈ ಪೈಕಿ ಆಡಳಿತಾ ರೂಡ ಬಿಜೆಪಿ 121 ಸದಸ್ಯ ಬಲವನ್ನು ಹೊಂದಿದೆ. ಇನ್ನು ಕಾಂಗ್ರೆಸ್ ಬಳಿ 44 ಸದಸ್ಯರ ಬೆಂಬಲವಿದ್ದು, ಜೆಡಿಯು 1 ಹಾಗೂ ಎನ್ ಸಿಪಿ 2 ಸದಸ್ಯರನ್ನು ಹೊಂದಿದೆ. ಕಾಂಗ್ರೆಸ್ ಗೆ ಈಗಾಗಲೇ 6 ಮಂದಿ ಶಾಸಕರು ರಾಜಿನಾಮೆ ನೀಡಿದ್ದಾರೆ. ರಾಜ್ಯಸಭೆ ಚುನಾವಣೆಯ ಅಭ್ಯರ್ಥಿ ಗೆಲುವಿಗೆ ತಲಾ 45 ಮತಗಳ ಅಗತ್ಯತೆ ಇದೆ.

LEAVE A REPLY

Please enter your comment!
Please enter your name here