ಭಾರತದೊಂದಿಗೆ ಉತ್ತಮ ಬಾಂಧವ್ಯದತ್ತ ಶೀ ಜಿನ್’ಪಿಂಗ್ ಚಿತ್ತ

0
100

ನವದೆಹಲಿ: ಭಾರತದೊಂದಿಗೆ ಚೀನಾವು ಉತ್ತಮ ಬಾಂಧವ್ಯವನ್ನು ಹೊಂದಬಯಸುತ್ತದೆ ಎಂದು ಚೀನಾ ಅಧ್ಯಕ್ಷ ಶೀ ಜಿನ್’ಪಿಂಗ್ ಹೇಳಿದ್ದಾರೆಂದು ಚೀನಾ ಸರ್ಕಾರಿ ಮಾಧ್ಯಮ ಸಂಸ್ಥೆಯಾದ ಶೀನ್’ಹುವಾ ವರದಿ ಮಾಡಿದೆ.

ಶಿಯಾಮೆನ್’ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ಸಭೆಯ ಸಂದರ್ಭದಲ್ಲಿ ಶೀ ಜಿನ್’ಪಿಂಗ್ ಹಾಗೂ ಪ್ರಧಾನಿ ಮೋದಿ ನಡೆಸಿದ ದ್ವಿಪಕ್ಷೀಯ ಮಾತುಕತೆಯಲ್ಲಿ, ಚೀನಾವು ಭಾರತದೊಂದಿಗೆ ಬಾಂಧವ್ಯವನ್ನು ಸರಿಯಾದ ಪಥದಲ್ಲಿ ಕೊಂಡೊಯ್ಯಬಯಸುತ್ತದೆ ಎಂದು ಶೀ ಜಿನ್’ಪಿಂಗ್ ಹೇಳಿದ್ದಾರೆ.

ಸಹಬಾಳ್ವೆಯ 5 ತತ್ವಗಳಾದ ‘ಪಂಚಶೀಲ’ ಮಾರ್ಗದರ್ಶನದೊಂದಿಗೆ ಚೀನಾವು ಭಾರತದೊಂದಿಗೆ ಜತೆಗೂಡಿ ಕೆಲಸ ಮಾಡಲು ಸಿದ್ಧವಿದೆ ಎಂದು ಶೀ ಜಿನ್’ಪಿಂಗ್ ಹೇಳಿದ್ದಾರೆಂದು ಏಎನ್‌ಐ ವರದಿ ಮಾಡಿದೆ.

ಕಳೆದ 73 ದಿನಗಳ ಹಿಂದೆ ಡೋಕ್ಲಾಮ್ ಬಿಕ್ಕಟ್ಟು ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಶೀ ಹಾಗೂ ಮೋದಿ ಭೇಟಿಯಾಗಿದ್ದಾರೆ.

ಡೋಕ್ಲಾಮ್’ನಂತಹ ಪರಿಸ್ಥಿತಿ ಇನ್ನೊಮ್ಮೆ ಮರುಕಳಿಸಬಾರದೆಂದು ಎರಡೂ ದೇಶಗಳು ಒಪ್ಪಿಕೊಂಡಿದ್ದು, ಅದಕ್ಕಾಗಿ ಭದರತಾ ಪಡೆಗಳು ಪರಸ್ಪರ ಉತ್ತಮ ಸಂಪರ್ಕಗಳನ್ನು ಹೊಂದಬೇಕು ಎಂದು ನಿರ್ಧರಿಸಿವೆ, ಎಂದು ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ತಿಳಿಸಿದ್ದಾರೆ.

Source DailyHunt

LEAVE A REPLY

Please enter your comment!
Please enter your name here