ವಿಜಯಪುರ ಜಿಲ್ಲೆಯಲ್ಲಿ ಮತ್ತೊಂದು ಮೇಲ್ಛಾಣಿ ಕುಸಿತ: ವೃದ್ಧ ದಂಪತಿ ಸಾವು

0
173

ನವದೆಹಲಿ, ಸೆ.7-ಹೋಟೆಲ್‍ಗಾಗಿ ಭೂ ಹಗರಣ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿರುವ ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಮತ್ತು ಅವರ ಪುತ್ರ ತೇಜಸ್ವಿ ಪ್ರಸಾದ್ ಅವರಿಗೆ ಕೇಂದ್ರೀಯ ತನಿಖಾ ದಳ(ಸಿಬಿಐ) ಇಂದು ಸಮನ್ಸ್ ಜಾರಿಗೊಳಿಸಿದೆ. ಖಾಸಗಿ ಸಂಸ್ಥೆಯೊಂದಕ್ಕೆ ಎರಡು ಐಆರ್‍ಸಿಟಿಸಿ ಹೋಟೆಲ್‍ಗಳ ಗುತ್ತಿಗೆ ನಿರ್ವಹಣೆ ನೀಡಲು ಲಂಚ ರೂಪದಲ್ಲಿ ಭೂಮಿಯನ್ನು ಪಡೆದಿದ್ದ ಲಾಲು, ಅವರ ಪುತ್ರ ಹಾಗೂ ಕುಟುಂಬದ ಇತರ ಸದಸ್ಯರು ಶಾಮೀಲಾಗಿದ್ದಾರೆ ಎಂಬ ಆರೋಪವಿದೆ.

ಈ ಪ್ರಕರಣದ ಸಂಬಂಧ ವಿಚಾರಣೆಗೆ ಒಳಪಡಿಸಲು ತಂದೆ ಮತ್ತು ಮಗನಿಗೆ ಸಿಬಿಐ ಸಮನ್ಸ್ ನೀಡಿದೆ. ದೆಹಲಿಯ ಸಿಬಿಐ ಕೇಂದ್ರ ಕಚೇರಿಯಲ್ಲಿ ಸೆ.11ರಂದು ವಿಚಾರಣೆಗೆ ಹಾಜರಾಗುವಂತೆ ಲಾಲೂ ಅವರಿಗೆ ಹಾಗೂ ತೇಜಸ್ವಿ ಮರುದಿನ ಪ್ರಶ್ನೆಗಳಿಗೆ ಉತ್ತರಿಸುವಂತೆ ಸಮನ್ಸ್‍ನಲ್ಲಿ ಸೂಚಿಸಲಾಗಿದೆ.

Leave a Reply

LEAVE A REPLY

Please enter your comment!
Please enter your name here